December 23, 2024

Newsnap Kannada

The World at your finger tips!

rashya car

ಭಾರತದಲ್ಲಿ ಸ್ಫೋಟಕ್ಕೆ ಹೊಂಚು : ಐಸಿಸ್​ ಉಗ್ರನನ್ನು ಬಂಧಿಸಿದ ರಷ್ಯಾ

Spread the love

ಭಾರತದ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೊಬ್ಬರನ್ನು ಗುರಿಯಾಗಿ ಇಟ್ಟುಕೊಂಡು ಭಾರತದಲ್ಲಿ ಸ್ಫೋಟ ನಡೆಸಲು ಹೊಂಚು ಹಾಕಿದ್ದ ಐಸಿಸ್ ಉಗ್ರನನ್ನು ರಷ್ಯಾದ ಭದ್ರತಾ ಪಡೆಗಳು ಬಂಧಿಸಿವೆ.

ಈ ಬಗ್ಗೆ ಸ್ವತಃ ರಷ್ಯಾವೇ ಅಧಿಕೃತವಾಗಿ ಮಾಹಿತಿ ನೀಡಿ ಭಾರತದಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ಭಾರತದ ಸ್ನೇಹಿತ ರಷ್ಯಾ ತಡೆದಂತಾಗಿದೆ.

ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಸೋಮವಾರ ಐಸಿಸ್ ಉಗ್ರನ ಬಗ್ಗೆ ಮಾಹಿತಿಯನ್ನು ನೀಡಿದೆ. ಅಝಾಮೌ ಈ ಉಗ್ರ ಮೂಲತಃ ಟರ್ಕಿಯವನು, ಅಲ್ಲೇ ಐಸಿಸ್​ ಅನ್ನು ಕೂಡ ಈತ ಸೇರಿಕೊಂಡಿದ್ದಾನೆ . ಈತನಿಗೆ ಭಾರತದ ಆಡಳಿತಾರೂಢ ಪಕ್ಷದ ಹಿರಿಯ ಮುಖಂಡರನ್ನು ಟಾರ್ಗೆಟ್ ಮಾಡಲು ಐಸಿಸ್​ ಟಾರ್ಗೆಟ್ ನೀಡಿತ್ತು.

ಅದರಂತೆ ಈತ ಭಾರತದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡು, ಅನಾಹುತ ಮಾಡಲು ತಯಾರಿ ನಡೆಸಿದ್ದನಂತೆ. ಈ ಬಗ್ಗೆ ಗುಪ್ತಚರ ಮಾಹಿತಿ ಪಡೆದುಕೊಂಡು ರಷ್ಯಾ ಈ ಉಗ್ರನನ್ನು ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Copyright © All rights reserved Newsnap | Newsever by AF themes.
error: Content is protected !!