ಅಂಬಿ ನೆನಪಲ್ಲಿ ಗುಡಿ : ನಾಳೆ ಅಂಬಿ ಕಂಚಿನ ಪ್ರತಿಮೆ ಅನಾವರಣ ಮಾಡಲಿರುವ ಸುಮಲತಾ

Team Newsnap
2 Min Read
ambi

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರು 2018 ನವೆಂಬರ್ 24 ರಂದು ಇಹಲೋಕ ತ್ಯಜಿಸಿದರು.

ಮೆಚ್ಚಿನ ನಟನ ಕಳೆದುಕೊಂಡ ಕೋಟ್ಯಾಂತರ ಅಭಿಮಾನಿಗಳು  ದುಃಖದ ಮಡುವಿನಲ್ಲಿ ಮುಳುಗಿದರು. ಅಭಿಮಾನಿಗಳು ಅಂಬಿ ಬದುಕಿದ್ದಾಗ ತೋರಿದ್ದ ಪ್ರೀತಿ, ಅಭಿಮಾನವನ್ನೇ ಅವರ ಸಾವಿನ ನಂತರವೂ ಮುಂದುವ ರೆಸಿದ್ದಾರೆ. ನಲ್ಮೆಯ ನಟನಿಗೆ ಗುಡಿಕಟ್ಟಿ ಪೂಜಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಅಂಬಿ ಗುಡಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಗ್ರಾಮದ ಜನರಿಗೆ ಅಂಬರೀಶ್ ಒಬ್ಬ ನಾಯಕ ನಟ ಅಲ್ಲ ಆರಾಧ್ಯ ದೈವ. ಹಾಗಾಗಿ ಈ ಜನರು ಅಂಬಿಯನ್ನ‌ ದೇವರೆಂದೆ ಭಾವಿಸಿದ್ದಾರೆ.

ಸುಮಾರು 100 ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಂದಿಬ್ಬರು ಅಂಬಿ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಅಂಬರೀಶ್ ಹುಟ್ಟಿದ ದಿನ ಮೇ 29 ರಂದು ಈ ಊರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಮನೆಮನೆಗಳಲ್ಲೂ ಹಸಿರು ತೋರಣ ಕಟ್ಟಿ ಅಂಬಿ ಹುಟ್ಟುಹಬ್ಬವನ್ನ ಊರ ಹಬ್ಬದ ರೀತಿಯಲ್ಲಿ ಆಚರಿಸುವ ಇವರು. ತಮ್ಮೂರಿನ‌ ಮೇಲಿದ್ದ  ಅಂಬಿಯ ಅವಿನಾಭಾವ ಸಂಬಂಧಕ್ಕೆ ಈಗ ಅಂಬಿಗಾಗಿ ಗುಡಿಯನ್ನೇ ಕಟ್ಟಿ ಪೂಜಿಸಲು ಮುಂದಾಗಿದ್ದಾರೆ.

ಚಿತಾಭಸ್ಮಕ್ಕೂ ಪೂಜೆ

ಅಂಬರೀಶ್‌ ಮರಣಹೊಂದಿದಾಗ ಅವರ ಚಿತಾಭಸ್ಮ ತಂದು ಸತತ ಒಂದು ವರ್ಷಕಾಲ ಗುಡಿ ನಿರ್ಮಾಣ ಮಾಡುವರೆಗೂ ಕಚೇರಿಯಲ್ಲಿಟ್ಟು ಈ ಊರಿನ ಜನರು ಪೂಜಿಸುತ್ತಿದರು. ಊರಿನ ಅಭಿಮಾನಿಗಳಿಂದಲೇ ಸುಮಾರು 8 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಗುಡಿ ಕಟ್ಟಿದ್ದಾರೆ.

ಗುಡಿಗೆ 8 ಲಕ್ಷ ರು ಖರ್ಚು

ಗುಡಿಯ ಒಳಭಾಗದಲ್ಲಿ ಅಂಬರೀಶ್‌ ಅವರ ಕಂಚಿನ ಪುತ್ಥಳಿ ಇಡಲಾಗಿದೆ. ಈ ಗುಡಿಗಾಗಿ 7 ರಿಂದ 8 ಲಕ್ಷ ಖರ್ಚು ಮಾಡಿರುವ ಗ್ರಾಮಸ್ಥರು ಅಂಬಿಯ ನೆನಪು ಎಂದಿಗೂ ಅಮರ ಅವರು ಬದುಕಿದ್ದ ರೀತಿ ಅವರ ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೂ ತಿಳಿಯಲಿ ಎಂದು ಈ ಪುತ್ಥಳಿ ನಿರ್ಮಿಸಿದ್ದೇವೆ ಎನ್ನುತ್ತಾರೆ ಈ ಊರಿನ‌ ಅಂಬಿ ಅಭಿಮಾನಿಗಳು.

ಒಟ್ಟಾರೆ ಅಭಿಮಾನಿಗಳ ಆಸೆಯಂತೆಯೇ ಅಂಬರೀಶ್ ಗುಡಿ ನಿರ್ಮಾಣವಾಗಿದೆ. ನವೆಂಬರ್​ 24 ರಂದು ಅಂಬರೀಶ್ 2 ವರ್ಷದ ಪುಣ್ಯಸ್ಮರಣೆ ದಿನ ಸಂಸದೆ ಸುಮಲತಾ ಅಂಬರೀಶ್ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ‌. ಅಭಿಮಾನಿಗಳು ಗ್ರಾಮದಲ್ಲಿ ಸಕಲ ಸಿದ್ದತೆ ಮಾಡಿಕೊಂಡಿದ್ದು, ನಾಳೆ ಅಂಬಿ ಗುಡಿ ಲೋಕಾರ್ಪಣೆಗೊಳ್ಳಲಿದೆ‌.

Share This Article
Leave a comment