January 7, 2025

Newsnap Kannada

The World at your finger tips!

hortti nama

ಸಭಾಪತಿ ಸ್ಥಾನಕ್ಕೆ ಬಸವರಾಜ್​ ಹೊರಟ್ಟಿಯಿಂದ ಮೈತ್ರಿ ಅಭ್ಯರ್ಥಿ: ನಾಮಪತ್ರ ಸಲ್ಲಿಕೆ

Spread the love

ಜೆಡಿಎಸ್​​- ಬಿಜೆಪಿ ಮೈತ್ರಿ ಅಭ್ಯರ್ಥಿ ಬಸವರಾಜ್​ ಹೊರಟ್ಟಿ ಸಭಾಪತಿ ಸ್ಥಾನದ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಮಾಜಿ ಸಚಿವ ಹೆಚ್​.ಡಿ ರೇವಣ್ಣ ನೀಡಿದ್ದ ಸಲಹೆಯಂತೆ ಶುಭ ಗಳಿಗೆಯಲ್ಲಿ  ಪರಿಷತ್​​ ಕಾರ್ಯದರ್ಶಿ ಮಹಾಲಕ್ಷ್ಮಿ ಅವರಿಗೆ ಹೊರಟ್ಟಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಹೊರಟ್ಟಿಗೆ ಪರಿಷತ್​​ ಸದಸ್ಯ ಶ್ರೀಕಂಠೇಗೌಡ, ಅಪ್ಪಾಜಿಗೌಡ ಬಿಜೆಪಿಯ​ ಕೋಟಾ ಶ್ರೀನಿವಾಸ್​​ ಪೂಜಾರಿ, ಮಹಾಂತೇಶ್​​ ಕವಟಗಿಮಠ್​​, ರಘುನಾಥ್​​ ಮಲ್ಕಾಪುರೆ ಸೇರಿದಂತೆ ಹಲವರು ಸಾಥ್​​ ನೀಡಿದರು.

ಈ ವೇಳೆ ಮಾತನಾಡಿದ ಬಸವರಾಜ್​​ ಹೊರಟ್ಟಿ ನಾನು ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್​ ನವರು ಅಭ್ಯರ್ಥಿ ಹಾಕಿದರೆ ನಾನೇನು ಹೇಳಲಿ, ಆ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೆ ಒಳ್ಳೆ ಅವಕಾಶ ಸಿಗುತ್ತಿದೆ ಎಂದಿದ್ದಾರೆ.

ಬಿಜೆಪಿ ಪರಿಷತ್​ ಸದಸ್ಯ ರವಿಕುಮಾರ್​ ಮಾತನಾಡಿ, ಹೊರಟ್ಟಿ ಅವರಿಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ.  ಕಾಂಗ್ರೆಸ್​ ನವರು ಅಭ್ಯರ್ಥಿ ಹಾಕದೇ ಇದ್ದಲ್ಲಿ ಹೊರಟ್ಟಿ ಅವಿರೋಧ ಆಯ್ಕೆಯಾಗಲಿದ್ದಾರೆ ಎಂದರು.

Copyright © All rights reserved Newsnap | Newsever by AF themes.
error: Content is protected !!