ಇದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಿದ್ದು, ನಟ ದರ್ಶನ್ ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಅಲ್ಲಿ ಅವರಿಗೆ ವಿಶೇಷ ಸೌಲಭ್ಯ ಸಿಕ್ಕ ವಿಷಯ ಹೊರಬಂದ ನಂತರ, ಅವರನ್ನು ಬಳ್ಳಾರಿ ಜೈಲಿಗೆ ವರ್ಗಿಸಲಾಗಿತ್ತು. ಈ ಮಧ್ಯೆ, ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲೂ ಈ ರೀತಿಯ ಘಟನೆಗಳು ನಡೆದಿರುವ ಆರೋಪ ಕೇಳಿ ಬಂದಿದೆ.
ತಿಂಗಳ ಹಿಂದೆ ಜೈಲಿನಲ್ಲಿರುವ ಕೈದಿಗಳು, ಸ್ಮಾರ್ಟ್‌ಫೋನ್ ಬಳಸಿ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ ಫೋಟೋಗಳು ಹಾಗೂ ಗಾಂಜಾ ಸೇದುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ, ಕೈದಿಗಳು ಜೈಲಿನಲ್ಲಿಯೇ ಐಷಾರಾಮಿ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.
ಈ ಪ್ರಕರಣದಲ್ಲಿ ವಿಪುಲ, ಸಾಗರ್ ಹಾಗೂ ಸೋನು ಎಂಬ ಮೂರು ಕೈದಿಗಳು, ಜೈಲಿನ ಕೋಣೆಯೊಳಗೆ ಕುಳಿತು ಸ್ಮಾರ್ಟ್‌ಫೋನ್ ಮೂಲಕ ವಿಡಿಯೋ ಕರೆ ಮಾಡುತ್ತಾ, ಗಾಂಜಾ ಸೇದುತ್ತಿರುವ ದೃಶ್ಯಗಳು ಬಹಿರಂಗವಾಗಿವೆ. ಕಳೆದ ತಿಂಗಳು ಜೈಲಿನಲ್ಲಿಯೇ ಗಾಂಜಾ ಸಾಗಣೆ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಬಂಧಿತರಾಗಿದ್ದರು.ಇದನ್ನು ಓದಿ –ಜೈಲಿನಲ್ಲಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ: ನಿರ್ಮಾಪಕನ ಬೆದರಿಕೆ ದೂರು ಪ್ರಕರಣ ಮತ್ತೆ ಮುಂದುವರಿಕೆ
ಈ ಹಿನ್ನಲೆಯಲ್ಲಿ, ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಈ ರೀತಿಯ ಘಟನೆಗಳ ತನಿಖೆಯನ್ನು ಸಿಸಿಬಿ ಗೆ ವಹಿಸಿ, ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು