ಅಲಮೇಲಮ್ಮನ ನೀಡದ್ದಾಳೆನ್ನಲಾದ ಶಾಪ ಮೂಢ ನಂಬಿಕೆಯೋ, ನಿಜವಾಗಲು ಶಾಪವೋ ಎಂಬ ವಿಚಾರದ ವೈಜ್ಞಾನಿಕ ಅಧ್ಯಯನವಾಗಬೇಕು ಎಂದು ಮಾಜಿ ಸಚಿವ ಸಿ ಟಿ ರವಿ ಎಂದು ಅಭಿಪ್ರಾಯ ಪಟ್ಟರು
ಮೈಸೂರಿನ ನಗರದ ವಸ್ತು ಪ್ರದರ್ಶನ ಆವರಣದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರವಿ
‘ಆರ್ಕಿಯಾಲಜಿಕಲ್ ಎಸ್ಕವೇಶನ್ ಅಟ್ ತಲಕಾಡು, ಕರ್ನಾಟಕದಲ್ಲಿ ಬೌದ್ಧ ಕಲೆ ಮತ್ತು ಸಂಸ್ಕೃತಿ, ಹಂಪಿ ಸ್ಪೆಂಡರ್ ದಟ್ ವಾಸ್, ಮೈಸೂರು ದಸರಾ ರಾಜ್ಯ ಹಬ್ಬ’ ಪುಸ್ತಕಗಳನ್ನು ಬಿಡುಗಡೆ ಮಾಡಿದ ಸಚಿವರು ‘ಮಾಲಂಗಿ ಮಡುವಾಗಲಿ ತಲಕಾಡು ಮರಳಾಗಲಿ ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಇದು ಅಲುಮೇಲಮ್ಮ ನೀಡಿದ ಶಾಪ. ಈ ಶಾಪದಂತೆ ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿದೆ. ಇನ್ನು ಮೈಸೂರು ರಾಜ ವಂಶಸ್ಥರಿಗೆ ಹಲವು ದಶಕಗಳಿಂದ ಮಕ್ಕಳೇ ಆಗಿಲ್ಲ. ಆದರೆ ಆಳವಾಗಿ ಯೋಚಿಸಿದಾಗ ಇದು ಒಂದು ಸಾತ್ವಿಕ ಶಕ್ತಿಯನ್ನು ಗಳಿಸಿಕೊಂಡ ವ್ಯಕ್ತಿ ಬಿಡುವ ನಿಟ್ಟುಸಿರು ಶತಮಾನಗಳವರೆಗೆ ಕಾಡುತ್ತದೆ’ ಎಂದು ಹೇಳಿದರು.
ಪ್ರಸ್ತುತ ಇರುವ ಶಿಕ್ಷಣ ನೀತಿಯ ಬಗೆಗೆ ಮಾತನಾಡಿದ ಅವರು ‘ಥಾಮಸ್ ಮೆಕಾಲೆಯ ಶಿಕ್ಷಣ ನೀತಿ ನಮ್ಮಲ್ಲಿ ಜ್ಞಾನ ಮೂಡಿಸುವದಕ್ಕಿಂತ ಹೆಚ್ಚಾಗಿ ಕೀಳರಿಮೆ ಉಂಟುಮಾಡುತ್ತದೆ. ನಾವು ಕೇವಲ ಆಳಿಸಿಕೊಳ್ಳಲಿಕ್ಕೆ ಮಾತ್ರ ಸೀಮಿತವಾದವರು ಎಂಬ ಭಾವನೆ ತರುತ್ತದೆ. ನಮ್ಮ ದೇಶದ ಇತಿಹಾಸದ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕು’ ಎಂದು ಹೇಳಿದರು.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ