ನಟ, ಟಿವಿ ನಿರೂಪಕ ಅಕುಲ್ ಬಾಲಾಜಿಯವರ ಒಡೆತನದ, ದೊಡ್ಡಬಳ್ಳಾಪುರ ಬಳಿಯ ಸನ್ ಶೈನ್ ರೆಸಾರ್ಟ್ ನಲ್ಲಿ ನಡೆದಿದೆ ಎನ್ನಲಾದ, ಡ್ರಗ್ಸ್ ಪಾರ್ಟಿ ಗಳಿಗೆ ಸ್ಟಾರ್ ದಂಪತಿಗಳು, ನಟ-ನಟಿಯರು ಬರುತ್ತಿದ್ದರು ಎಂದು ಸಿಸಿಬಿ ಪೋಲೀಸರಿಗೆ ಮಾಹಿತಿ ದೊರಕಿದೆ.
ಈ ಆಧಾರದ ಮೇಲೆಯೇ ಅಕುಲ್ ಬಾಲಾಜಿಯವರಿಗೆ ಸಿಸಿಬಿ ನೋಟೀಸ್ ನೀಡಿದೆ.
ಅಕುಲ್ ತಮ್ಮ ರೆಸಾರ್ಟ್ ನಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ನಟ-ನಟಿಯರು ಆಗಮಿಸುತ್ತಿದ್ದರು. ಸ್ಟಾರ್ ದಂಪತಿಗಳೂ ಸಹ ಬರುತ್ತಿದ್ದರು. ಈ ವೇಳೆಯಲ್ಲಿ ಅಕುಲ್ ರಾಹುಲ್ ಹಾಗೂ ವೀರೇನ್ ಖನ್ನಾ ಅವರಿಂದ ಮಾದಕವಸ್ತುಗಳನ್ನು ತರಿಸಿ, ಪಾರ್ಟಿಯಲ್ಲಿರುವ ನಟ – ನಟಿಯರಿಗೆ, ಒಂದು ಎಡಿಎಂ ಮಾತ್ರೆಯನ್ನು ನಾಲ್ಕು ಭಾಗಗಳಾಗಿ ಮಾಡಿ, ಜ್ಯೂಸ್ ನಲ್ಲಿ ಬೆರೆಸಿ ನೀಡಲಾಗುತ್ತಿತ್ತು. ಈ ರೆಸಾರ್ಟ್ ನಲ್ಲಿ ಪೇಜ್ ೩ ಪಾರ್ಟಿಗಳನ್ನೂ ಸಹ ಆಯೋಜನೆ ಮಾಡಲಾಗುತ್ತಿತ್ತು ಎಂದು ಸಿಸಿಬಿಯವರಿಗೆ ಮಾಹಿತಿಗಳು ದೊರಕಿವೆ.
ಏಪ್ರಿಲ್ ೨೦ರಂದು ಭರ್ಜರಿ ಪಾರ್ಟಿಯನ್ನು ಅಕುಲ್ ಆಯೋಜನೆ ಮಾಡಿದ್ದರು. ಅದು ಲಾಕ್ ಡೌನ್ ಸಂದರ್ಭವಾದ್ದರಿಂದ ಸ್ಥಳೀಯರು ಪೋಲೀಸ್ ಕಂಪ್ಲೇಂಟ್ ನೀಡಿದ್ದರು ಎನ್ನಲಾಗಿದೆ. ಇದರ ಬಗೆಗಿನ ಖಚಿತ ಮಾಹಿತಿ ಅಕುಲ್ ಅವರ ವಿಚಾರಣೆಯ ಬಳಿಕವೇ ತಿಳಿಯಬೇಕಿದೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ