Editorial

ಅಕ್ಷಯ ತೃತೀಯ ಬಂತು ಮತ್ತೇ ಖುಷಿಯ ತಂತು

ಅಕ್ಷಯ ತೃತೀಯ ಹಿಂದುಗಳಿಗೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ, ಅಕ್ಷಯ ಎಂದರೆ ಶಾಶ್ವತ ಎಂದರ್ಥ!

ಸ್ನೇಹಾ ಆನಂದ್ 🌻

ಈ ಶುಭ ದಿನದಂದು ನಾವು ಮಾಡಿದ ದಾನ ಧರ್ಮಗಳು ಶಾಶ್ವತವಾಗಿ ನಮಗೆ ಸಮೃದ್ಧಿ ತರುತ್ತವೆ, ಚಿನ್ನವನ್ನು ಖರೀದಿ ಮಾಡುವುದು ಈ ದಿನ ಶುಭಕರ ಎಂದು ಅತ್ಯಂತ ಮಾನ್ಯತೆ ಪಡೆದಿದೆ !

ಈ ದಿನ ಪೂರ್ತಿ ಒಳ್ಳೆಯ ಮೂಹೂರ್ತ ನೋಡುವುದು ಬೇಕಿಲ್ಲ ಏಕೆಂದರೆ ಈ ದಿನವೇ ಸಂಪೂರ್ಣವಾಗಿ ಪ್ರತಿ ಕ್ಷಣ ಕ್ಷಣವೂ ಒಳ್ಳೆಯ ಕ್ಷಣಗಳಿಂದ ಕೂಡಿದೆ!

ಎಲ್ಲಾ ಶುಭ ಕಾರ್ಯಗಳನ್ನು ನಡೆಸಲು ಮದುವೆ, ಮುಂಜಿ, ಆಸ್ತಿ ಖರೀದಿ, ಚಿನ್ನ , ಬೆಳ್ಳಿ, ಖರೀದಿ, ಹೊಸ ಉದ್ಯಮ ಪ್ರಾರಂಭ ಮಾಡಲು, ದಾನ ಧರ್ಮವನ್ನು ಕೈಗೊಳ್ಳಲು
ಹೀಗೆ ಪ್ರತಿಯೊಂದಕ್ಕೂ ಅತಿ ಶ್ರೇಷ್ಠ ದಿನವೆಂದು ಪರಿಗಣಿಸಲ್ಪಟ್ಟಿದೆ ಈ ಅತ್ಯದ್ಭುತ ದಿನ!

ಚಿನ್ನವನ್ನು ಖರೀದಿ ಮಾಡಲು ಶುಭ ದಿನವೆಂದು ಚಿನ್ನದ ಮಳಿಗೆಗಳು ಜನಭರಿತವಾಗಿರುತ್ತವೆ! ವ್ಯಾಪಾರಿಗಳಿಗೆ ಈ ದಿನ ಲಾಭದಾಯಕ ಹೀಗಾಗಿ ಅವರು ಸಂಭ್ರಮದಿಂದ ದಿನವೆಲ್ಲಾ ಆಯಾಸಗೊಳ್ಳದೆ ಲವಲವಿಕೆಯಿಂದ ಇದ್ದು ತಡ ರಾತ್ರಿಯವರೆಗೂ ಚಿನ್ನದ ಮಳಿಗೆಯನ್ನು ತೆರೆದಿತ್ತಾರೆ! ಒಂದು ಗ್ರಾಂ ಚಿನ್ನವನ್ನಾದರೂ ಈ ಶುಭ ದಿನ ತೆಗೆದುಕೊಂಡರೆ ಮನದಲ್ಲಿ ಎನೋ ಒಂದು ರೀತಿಯ ಸಂತಸ ಹೆಣ್ಣು ಮಕ್ಕಳಿಗೆ!

ಅಕ್ಷಯ ತೃತೀಯದ ದಿನ ಜಗತ್ತನ್ನು ದುಷ್ಟರಿಂದ ಮುಕ್ತಗೊಳಿಸಲು ಭಗವಾನ್ ವಿಷ್ಣುವಿನ ಆರನೇ ಅವತಾರದ ಪರಶುರಾಮನಾಗಿ ರೇಣುಕೆ ಮತ್ತು ಜಮದಗ್ನಿ ಋಷಿಯ ಮಗನಾಗಿ ಜನ್ಮ ತೆಳೆದ ಶುಭದಿನ!

ಸುಧಾಮ ಕೃಷ್ಣರ ಭೇಟಿಯಾದ ಅಪೂರ್ವ ದಿನ, ಹಾಗೂ ಸುಧಾಮನ ಬಡತನ ನಿವಾರಿಸಿದ ದಿನ , ದ್ವಾರಕೆಯಲ್ಲಿ ಕೃಷ್ಣನನ್ನು ಭೇಟಿಯಾಗಿ ಸುಧಾಮ ತನ್ನ ಬಡತನದಲ್ಲೂ ಮುಷ್ಠಿ ಅವಲಕ್ಕಿಯನ್ನು ತಂದು ಕೃಷ್ಣನಿಗೆ ಭಕ್ತಿಯಿಂದ ಅರ್ಪಿಸಿದ ದಿನ, ಕೃಷ್ಣ ಸಂತಸಪಟ್ಟು ಮುಷ್ಟಿ ಅವಲಕ್ಕಿಯನ್ನು ತಿಂದು ಸುಧಾಮನಿಗೆ ಸಂಪತ್ತನ್ನು ಕೊಟ್ಟು ಆಶೀರ್ವದಿಸಿದ ದಿನ!

ಕೃಷ್ಣ ಸುಧಾಮಗೆ ಸಂಪತ್ತು ಮತ್ತು ಸಮೃದ್ಧಿಯನ್ನು ದಯಪಾಲಿಸಿದನು ಶಾಶ್ವತವಾಗಿ ಅಕ್ಷಯವಾಗಲೆಂದು, ಹೀಗಾಗಿ ಇಂದಿನ ದಿನ ಏನೇ ಒಳ್ಳೆಯ ಕಾರ್ಯ ಮಾಡಿದರು ಅಕ್ಷಯವಾಗುತ್ತದೆ ಎಂಬ ಭಾವನೆ!

ಅಕ್ಷಯವೆಂದರೆ ಕೊನೆ ಇರಲಾರದ್ದು ಶಾಶ್ವತವಾದದ್ದು ಎಂದರ್ಥ,
ಪಾಂಡವರು ವನವಾಸದಲ್ಲಿದ್ದಾಗ ಆಹಾರಕ್ಕಾಗಿ ಪರಿತಪಿಸಿದಾಗ ಕೃಷ್ಣ ದ್ರೌಪದಿಗೆ ಅಕ್ಷಯಪಾತ್ರೆಯನ್ನು ನೀಡಿ ಪಾಂಡವರ ಹಸಿವೆಯನ್ನು ಪರಿಹರಿಸಿದನು! ಆ ಅಕ್ಷಯ ಪಾತ್ರವು ಪಾಂಡವರನ್ನು ತಮ್ಮ ವನವಾಸದ ದಿನಗಳಲ್ಲಿ ಹಸಿವೆಯಿಂದ ಎಂದಿಗೂ ಬಳಲದಂತೆ ನೋಡಿಕೊಳ್ಳುತ್ತದೆ!
ಹೀಗಾಗಿ ಈ ದಿವಸಕ್ಕೆ ಅಕ್ಷಯ ತೃತೀಯ ದಿನ ಎಂದು ಹೆಸರು ಬರಲು ಕಾರಣ ಎನ್ನಲಾಗಿದೆ.

ಹಿಂದೂ ಪುರಾಣಗಳ ಪ್ರಕಾರ ಅಕ್ಷಯ ತೃತೀಯ ತೇತ್ರಾಯುಗದ ಆರಂಭವನ್ನು ಸೂಚಿಸುತ್ತದೆ ಗಂಗಾದೇವಿಯು ನದಿಯಾಗಿ ಸ್ವರ್ಗದಿಂದ ಭೂಮಿಗಿಳಿದ ಪುಣ್ಯ ದಿನವೆಂದು ಹೀಗಾಗಿ ಶುದ್ಧತೆ ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ!
ಅಕ್ಷಯ ತೃತೀಯ ದಾನ ಮತ್ತು ದಾನದ ಮಹತ್ವವನ್ನು ಒತ್ತಿ ಹೇಳುವ ದಿನವಾಗಿದೆ, ಬಡವರಿಗೆ ಮಾಡುವ ದಾನ ಧರ್ಮವು ಈ ದಿನ ಅತಿ ಶ್ರೇಷ್ಠವನಿಸಿದೆ!

ಅಕ್ಷಯ ತೃತೀಯವು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿಯಂದು ಬರುತ್ತದೆ, ಅಕ್ಷಯ ತೃತೀಯದ ದಿನ ಸೂರ್ಯ ಚಂದ್ರರು ಒಳ್ಳೆಯ ಗ್ರಹದಲ್ಲಿರುತ್ತಾರೆ, ಹೀಗಾಗಿ ಅಂದು ನವಗ್ರಹಗಳೆಲ್ಲ ಶುಭಕರವಾಗಿರುತ್ತದೆ, ಗ್ರಹಗತಿಗಳೆಲ್ಲ ಸರಿಯಾಗಿ ಇರುವ ಏಕೈಕ ದಿನ ಅಕ್ಷಯ ತೃತೀಯ ಎಂದು ನಂಬಲಾಗಿದೆ! ಹೀಗಾಗಿ ಪ್ರತಿಯೊಬ್ಬರು ಅಕ್ಷಯ ತೃತೀಯದಂದು ಮಂಗಳ ಕಾರ್ಯಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಾರೆ!

ಈ ದಿನ ದೇವಾಲಯಗಳನ್ನು ಸುಂದರವಾಗಿ ಅಲಂಕೃತಗೊಳಿಸಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಭಕ್ತಾದಿಗಳು!
ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಇಂದು ಮನೆಯಲ್ಲಿ ಪೂಜೆ ಕೈಗೊಂಡು ಶುದ್ಧ ಮನಸ್ಸಿನಿಂದ ಭಜಿಸಿ ಹೂವಿನಿಂದ ಅಲಂಕರಿಸಿ, ಭಕ್ತಿಯಿಂದ ಪಠನೆ ಮಾಡಿ ನಂದಾ ದೀಪ ಹಚ್ಚಿ ನೈವೇದ್ಯ ನೀಡಿ ಹೆಂಗೆಳೆಯರು ಆರುತಿ ಬೆಳಗಿ
ದಾನ ಧರ್ಮವನ್ನು ಮಾಡಿ ಚಿನ್ನವನ್ನು ಧರಿಸಿ ಖರೀದಿಸಿದರೆ ಈ ದಿನ ಸಂಪೂರ್ಣಗೊಂಡಂತೆ!

ಭಗವಾನ್ ವಿಷ್ಣುವಿನ ದಿನವೆಂದು ಅಕ್ಷಯ ತೃತೀಯ ಅತಿ ಮಹತ್ವ ಪಡೆದಿದೆ, ಪರುಶುರಾಮನ ರೂಪವಾಗಿ ವಿಷ್ಣುವನ್ನು, ಕೃಷ್ಣ ಸುಧಾಮನಿಗೆ ನೀಡಿದ ಸಂಪತ್ತು ಸಮೃದ್ಧಿಯನ್ನು ಮತ್ತು ಗಂಗಾದೇವಿಯು ಭೂಮಿಗಿಳಿದು ಗಂಗಾ ನದಿಯಾದ ಸುದಿನವೆಂದು,ಪಾಂಡವರಿಗೆ ಕೃಷ್ಣ ನೀಡಿದ ಅಕ್ಷಯ ಪಾತ್ರೆಯನ್ನು ನೆನಪಿಸಿಕೊಂಡು ಮಾಡುವ ಅತಿ ಸರ್ವ ಶ್ರೇಷ್ಠ ಹಬ್ಬವೆಂದು ಪರಿಗಣಿಸಲಾಗಿದೆ!

ಪುರಾಣ ಪುಣ್ಯ ಕಥೆಗಳನ್ನು ಹೊಂದಿದ ಸ್ವರ್ಗಕ್ಕೆ ಸಮನಾದ ಈ ದಿನವನ್ನು ನಾವು ಭಕ್ತಿಯಿಂದ, ಆಚರಿಸಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸತ್ಕಾರ್ಯಗಳ ಬಗ್ಗೆ ಗಮನ ಕೊಟ್ಟಾಗ ಭೂಲೋಕದಲ್ಲಿ ಗಂಗಾದೇವಿಯ ಕೃಪಾಕಟಾಕ್ಷದಿಂದ ಮಳೆ ಬೆಳೆ ಸಮೃದ್ಧಿಯಾಗಿ ಜೀವನ ಸುಖಮಯವಾಗಿರುತ್ತದೆ!

ದೇವರಿಗೆ ಅರ್ಪಿಸಿ ಮಾಡಿದ ಪ್ರತಿಯೊಂದು ದಿನವೂ ಪುಣ್ಯ ದಿನವೇ ಎಂದು ಹೇಳಬಹುದು, ಆದರೆ ಸರ್ವ ಫಲಗಳನ್ನು ನೀಡುವ ಇಂತಹ ಅಪರೂಪದ ದಿನಗಳು ನಮಗೆ ನೆಮ್ಮದಿ ಸುಖ ಸಮೃದ್ಧಿ ತಂದು ಮಂಗಳಕರ ದಿನವನ್ನಾಗಿಸುತ್ತವೆ ಖಂಡಿತವಾಗಿಯೂ! SSLC ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಈ ವರ್ಷದ ಅಕ್ಷಯ ತೃತೀಯ ದಿನದಂದು ಎಲ್ಲರಿಗೂ ಶುಭ ತರಲಿ ನಲಿವಿನಿಂದ ಕೂಡಿರಲಿ
ಎಂದು ಮನಃಪೂರ್ವಕವಾಗಿ ಹಾರೈಸೋಣ!

Team Newsnap
Leave a Comment

Recent Posts

ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು : 10 ವರ್ಷದ ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ನಂಬಿಸಿ ಕಾಮುಕನೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ… Read More

May 20, 2024

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ಲೆಸ್ ಕ್ಲಬ್… Read More

May 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024