January 14, 2025

Newsnap Kannada

The World at your finger tips!

WhatsApp Image 2022 01 18 at 8.28.27 AM

ಸೂಪರ್ ಸ್ಟಾರ್ ರಜನಿ ಪುತ್ರಿ ಐಶ್ವರ್ಯಾ: ನಟ ದನುಷ್ ದಾಂಪತ್ಯದಲ್ಲಿ ಬಿರುಕು – ಸಹಮತದ ವಿಚ್ಛೇದನ

Spread the love

ಕಾಲಿವುಡ್ ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ 18 ವಷ೯ಗಳ ಸುಧೀಘ೯ ದಾಂಪತ್ಯಕ್ಕೆ ಪರಸ್ಪರ ಒಪ್ಪಿಗೆ ಮೇರಿಗೆ ವಿಚ್ಛೇದನ ಪಡೆದು ದೂರವಾಗಿದ್ದಾರೆ.

2004 ರಲ್ಲಿ ಐಶ್ವರ್ಯಾ ಹಾಗೂ ಧನುಷ್ ಪ್ರೀತಿಸಿ ಮದುವೆಯಾಗಿದ್ದ ತಾವು ದೂರವಾಗುತ್ತಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ಧನುಷ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ , ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ.

ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.
ಧನುಷ್ ಅವರ ಪೋಸ್ಟ್‌ನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡ ಐಶ್ವರ್ಯಾ, ಇದಕ್ಕೆ ಶೀರ್ಷಿಕೆ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ನಿಮ್ಮ ಪ್ರೀತಿ ಮಾತ್ರ ಅಗತ್ಯ ಎಂದು ಬರೆದುಕೊಂಡು ದಾಂಪತ್ಯ ಜೀವನದಿಂದ ಇಬ್ಬರು ದೂರವಾಗುತ್ತಿರುವ ಕುರಿತಾಗಿ ತಿಳಿಸಿದ್ದಾರೆ.

ದಂಪತಿಗಳಿಗೆ 2006 ಹಾಗೂ 2010 ರಲ್ಲಿ ಜನಿಸಿದ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಐಶ್ವರ್ಯಾ ಅವರ ಮೊದಲ ನಿರ್ದೇಶನದ ‘3’ ನಲ್ಲಿ ಧನುಷ್ ಕೆಲಸ ಮಾಡಿದ್ದರು ಮತ್ತು ಚಿತ್ರದ ‘ಕೊಲವೆರಿ ಡಿ’ ಹಾಡು ಸೂಪರ್ ಹಿಟ್ ಆಗಿ ಎಲ್ಲಾ ಕಡೆ ಸದ್ದು ಮಾಡಿತ್ತು.

ಎರಡನೇ ಪುತ್ರಿ ಸೌಂದರ್ಯ ಕೂಡ ಮೊದಲ ಮದುವೆ ಮುರಿದುಕೊಂಡು ಕೆಲವೇ ವರ್ಷಗಳ ಹಿಂದೆ ಎರಡನೇ ವಿವಾಹವಾಗಿದ್ದರು.

Copyright © All rights reserved Newsnap | Newsever by AF themes.
error: Content is protected !!