January 10, 2025

Newsnap Kannada

The World at your finger tips!

3fc29746 690f 44d3 99f3 7df2403b814d

ಎಸ್ಎಂಕೆ ಮೊಮ್ಮಗ ಅಮರ್ಥ್ಯ – ಐಶ್ವರ್ಯ ಗೆ ಫೆ. 14ಕ್ಕೆ ವಿವಾಹ ಫಿಕ್ಸ್ ; ಡಿಕೆಶಿ ಗೆ ಮತ್ತೆ ಸಿಬಿಐ ಸಮನ್ಸ್

Spread the love
  • ನಿಶ್ಚಿತಾರ್ಥಕ್ಕೆ ಡೈಮಂಡ್ ರಿಂಗ್ ಎಕ್ಸ್‌ಚೇಂಜ್ – ಪ್ರೇಮಿಗಳ ದಿನವೇ ವಿವಾಹ
  • ಈಗಲೂ ಎಸ್ ಎಂ ಕೃಷ್ಣ ಗುರು- ಡಿಕೆಶಿ ಶಿಷ್ಯ ನ ಸಂಬಂಧ ಬೆಸೆಯಿತು ಬೀಗತನ
  • ನಿಶ್ಚಿತಾರ್ಥಕ್ಕೆ ಕಾಂಗ್ರೆಸ್ ನಾಯಕರೇ ಕಮ್ಮಿ – ದಂಡಿಯಾಗಿ ಬಂದಿದ್ದ ಬಿಜೆಪಿ ನಾಯಕರು
  • ಮಗಳ ಮದುವೆ ಸಂಭ್ರಮದಲ್ಲಿದ್ದ ಡಿ. ಕೆ. ಶಿವಕುಮಾರ್ ಗೆ ಖುದ್ದು ವಿಚಾರಣೆ ಹಾಜರಾಗುವಂತೆ ಸಿಬಿಐ ನೋಟಿಸ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ ದಿವಗಂತ ಸಿದ್ದಾರ್ಥ್ ಹೆಗಡೆ ಪುತ್ರ ಅಮರ್ತ್ಯ ಹೆಗಡೆಯವರ ವಿವಾಹ ದಿನಾಂಕ ನಿಗದಿಯಾಗಿದೆ.

ಐಶ್ವರ್ಯ ಹಾಗೂ ಅಮರ್ಥ್ಯ ಹೆಗ್ಡೆ ಮದುವೆ ಫೆಬ್ರವರಿ 14 ರಂದು ನಿಶ್ಚಯವಾಗಿದೆ.

ಕಳೆದ ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಐಶ್ವರ್ಯ ಹಾಗೂ ಅಮರ್ಥ್ಯ ಗುರು- ಹಿರಿಯರ ಸಮ್ಮುಖದಲ್ಲಿ ವಜ್ರದ ಉಂಗುರ ಬದಲಾಯಿಸಿಕೊಂಡಿದ್ದರು.

7d889796 bcc8 4315 9403 4a3f39c6a7da

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಿಗಿಂತ ಬಿಜೆಪಿ ನಾಯಕರೇ ಹೆಚ್ಚಾಗಿ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿ ಅಚ್ಚರಿಗೆ ಕಾರಣವಾಗಿತ್ತು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಆರ್.ಅಶೋಕ್, ಸುಧಾಕರ್, ವಿ.ಸೋಮಣ್ಣ ಸೇರಿದಂತೆ ಅನೇಕ ಬಿಜೆಪಿ ನಾಯಕರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಿಕೆಶಿಗೆ ಕಂಟಕ – ಸಿಬಿಐ ಮತ್ತೆ ನೋಟಿಸ್ :

download 2

ಮಗಳ ಮದುವೆಯ ಸಂಭ್ರಮ ದಲ್ಲಿದ್ದ ಡಿಕೆ ಶಿವಕುಮಾರ್ ಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಮತ್ತೆ ನೋಟಿಸ್ ಜಾರಿ ಮಾಡಿದೆ.
ಅಕ್ಟೋಬರ್ 5 ರಂದು ಡಿಕೆಶಿ ನಿವಾಸದ ಮೇಲೆ ದಾಳಿ ಮಾಡಿದ್ದ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 25 ರಂದು ಖುದ್ದು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಒತ್ತಡದಲ್ಲಿರುವ ಡಿಕೆಶಿ ಸಧ್ಯಕ್ಕೆ ನೆಮ್ಮದಿ ಎಂಬುದಿಲ್ಲ ಎನ್ನುವಂತಾಗಿದೆ

Copyright © All rights reserved Newsnap | Newsever by AF themes.
error: Content is protected !!