ಫೆ.3 ರಿಂದ 5 ರ ವರೆಗೆ ಮೂರು ದಿನಗಳ ಕಾಲ ಲೋಹದ ಹಕ್ಕಿಗಳ (ಏರ್ ಶೋ) ವೈಮಾನಿಕ ಪ್ರದರ್ಶನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.
ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕಾಗಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಕುರಿತು ವಾಯುಪಡೆಯ ಏರ್ ಆಫೀಸರ್ ಕಮಾಂಡರ್ ಶೈಲೇಂದ್ರ ಸೂದ್ ಮತ್ತಿತರ ಹಿರಿಯ ಅಧಿಕಾರಿಗಳು
ಸುದ್ದಿಗಾರರಿಗೆ ಈ ಕುರಿತಂತೆ ಮಾಹಿತಿ ನೀಡಿದರು.
ವೈಮಾನಿಕ ಪ್ರದರ್ಶನಕ್ಕೆ ಸಿದ್ದತೆ ಗಳು ಏನು? :
- ಪ್ರದರ್ಶನದ ವೇಳೆ ಅಗತ್ಯ ತುರ್ತು ಚಿಕಿತ್ಸೆ, ವೈದ್ಯೋಪಚಾರ, ವಿಪತ್ತು ನಿರ್ವಹಣೆ, ವೈಮಾನಿಕ ಅಪಾಯ, ಅನುಮಾನಾಸ್ಪದ ದ್ರೋಣ್ ಹಾರಾಟ ತಡೆಗಟ್ಟುವಿಕೆ ಸೇರಿದಂತೆ ಮತ್ತಿತರ ಪರಿಸ್ಥಿತಿ ಎದುರಿಸಲು ತಯಾರಿ.
- ನೆಲಮಟ್ಟದಲ್ಲಿ ಶಸ್ತ್ರಸಜ್ಜಿತ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು. ಯಲಹಂಕ ವಾಯುನೆಲೆಯಲ್ಲಿ ಮೂರು ಹಂತದ ಭದ್ರತೆ ಇರುತ್ತದೆ.
- ಕಳೆದ ಬಾರಿಯಂತೆ ಅಗ್ನಿ ಅವಘಡ ಸಂಭವಿಸಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
- ವಾಹನ ನಿಲ್ದಾಣದಲ್ಲಿ ಹುಲ್ಲು ಬೆಳೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಆ ಜಾಗವನ್ನು ಸಮತಟ್ಟು ಮಾಡಲಾಗಿದೆ ಯಾವುದೇ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಸೂರ್ಯಕಿರಣ್ – ಸಾರಂಗ್ ಜೋಡಿ ಪ್ರದರ್ಶನ :
- ಭಾರತೀಯ ಸೇನೆಯ ಸೂರ್ಯಕಿರಣ ಹಾಗೂ ಸಾರಂಗ್ ಜೊತೆಯಾಗಿ ಪ್ರಥಮ ಬಾರಿಗೆ ವೈಮಾನಿಕ ಪ್ರದರ್ಶನ ನೀಡಲಿದೆ. ಚಿನೂಕ್ ಹೆಲಿಕಾಪ್ಟರ್ ಮೊದಲ ಬಾರಿಗೆ ಏರ್ ಶೋನಲ್ಲಿ ಪಾಲ್ಗೊಳ್ಳತ್ತಿದೆ. ಡಕೊಟಾ, ಲಘು ಯುದ್ಧ ವಿಮಾನ, ಸುಖೋಯ್-30 ಸೇರಿದಂತೆ ವೈಮಾನಿಕ ಕಸರತ್ತು ನೀಡಲಿದೆ. ವಿದೇಶಿ ವಿಮಾನಗಳ ಹಾರಾಟವನ್ನು ನಿರೀಕ್ಷಿಸಲಾಗಿದೆ. 42 ವಿಮಾನಗಳ ಪ್ರದರ್ಶನ.:
- 13ನೇ ಆವೃತ್ತಿಯ ಏರ್ ಶೋ- 2021ನಲ್ಲಿ 42 ವಿಮಾನಗಳು ಸ್ಥಿರ ಪ್ರದರ್ಶನದಲ್ಲಿ ಇರುತ್ತವೆ.
- ಫೆ.3 ರ ಉದ್ಘಾಟನಾ ದಿನದಂದು ಎಲ್ ಸಿಎ, ಹಾಕ್, ರಫಾಲ್, ಎಲ್ ಯುಎಚ್, ಜಾಗ್ವಾರ್ ಸೇರಿದಂತೆ 41 ವಿಮಾನಗಳು ವೈಮಾನಿಕ ಹಾರಾಟ ನಡೆಸಲಿದೆ.
- ವೈಮಾನಿಕ ಕಸರತ್ತು ಪ್ರತಿದಿನ ಬೆಳಿಗ್ಗೆ 9 ರಿಂದ 12 ಗಂಟೆ ತನಕ ಹಾಗೂ ಮಧ್ಯಾಹ್ನ 2 ರಿಂದ 5 ರ ತನಕ ಇರಲಿದೆ.
ಏರ್ ಶೋ ಪ್ರವೇಶಕ್ಕೆ ಮಿತಿ :
- 13ನೇ ಆವೃತ್ತಿಯಲ್ಲಿ ಏರ್ ಶೋ ಸ್ಥಿರ ಪ್ರದರ್ಶನಕ್ಕೆ ಪ್ರತಿದಿನದ ಪ್ರವೇಶ ಮಿತಿ 15,000 ಹಾಗೂ ವಾಯು ಪ್ರದರ್ಶನ ಜಾಗಕ್ಕೆ ಕೇವಲ 3,000 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಸಾಮಾನ್ಯ ಜನರು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ 500 ರೂ. ನೀಡಿ ಇ- ಟಿಕೇಟ್ ಪಡೆದು ಏರ್ ಶೋ ಉದ್ಘಾಟನಾ ದಿನ ಮಧ್ಯಾಹ್ನ 1 ಗಂಟೆಯಿಂದ ಮತ್ತು ಪ್ರತಿದಿನ (ಫೆ.5ರ ತನಕ) ಬೆಳಗ್ಗೆ 9 ಗಂಟೆ ವೈಮಾನಿಕ ಪ್ರದರ್ಶನ ನಡೆಯುವ ಸ್ಥಳಕ್ಕೆ ಆಗಮಿಸಬಹುದು.
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
More Stories
ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ