ಬೆಂಗಳೂರು: ಬಜೆಟ್ ನಲ್ಲಿ ಮತ್ತೆ ಮದ್ಯದ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಲಾಗಿದ್ದು , ಹೆಚ್ಚಿನ ಆದಾಯ ಸಂಗ್ರಹದ ಗುರಿಯೊಂದಿಗೆ ಇತರ ರಾಜ್ಯಗಳ ಬೆಲೆಗಳಿಗೆ ಹೊಂದಿಕೆಯಾಗುವಂತೆ ಮದ್ಯದ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.
ಎಂಐಎಲ್ ಮತ್ತು ಬಿಯರ್ ಸ್ಲ್ಯಾಬ್ ಗಳನ್ನು ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ.
ಕಳೆದ ಸಾಲಿಗಿಂತ 2525 ಕೋಟಿ ರೂ. ಅಧಿಕ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. 2023 -24 ರಲ್ಲಿ ಅಬಕಾರಿ ಇಲಾಖೆಯಿಂದ 36,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದ್ದು, ಜನವರಿ ಅಂತ್ಯದವರೆಗೆ 28,181 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ.
ಕರ್ನಾಟಕದಲ್ಲಿಯೂ ಬೇರೆ ರಾಜ್ಯಗಳ ಬೆಲೆಗೆ ಅನುಗುಣವಾಗಿ ಮದ್ಯದ ಬೆಲೆಗಳನ್ನು ಪರಿಷ್ಕರಿಸುವುದರಿಂದ 2024 -25 ನೇ ಸಾಲಿಗೆ 38,525 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.ಮಹಿಳಾ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಅಬಕಾರಿ ಇಲಾಖೆಯ ಎಲ್ಲಾ ಸೇವೆ ಡಿಜಿಟಲ್ ಮಾಡಲಿದ್ದು, ಇಲಾಖೆ ಒದಗಿಸುವ ಎಲ್ಲಾ ಸೇವೆಗಳಿಗೆ ಸಮಯದ ಮಿತಿ ನಿಗದಿಪಡಿಸಲಾಗುವುದು .
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ