February 22, 2026

Newsnap Kannada

The World at your finger tips!

palaniswamy

ಎಐಡಿಎಂಕೆಗೆ ಶಶಿಕಲಾ ಸೇರ್ಪಡೆಯ ಮಾತೇ‌ ಇಲ್ಲ- ಸಿಎಂ ಪಳನಿಸ್ವಾಮಿ

Spread the love

ಜ. 27 ರಂದು‌ ಕಾರಾಗೃಹದಿಂದ ಬಿಡುಗಡೆಯಾಗುವ ಶಶಿಕಲಾ ಅವರನ್ನು ಮತ್ತೆ ಎಐಡಿಎಂಕೆ ಸೇರಿಸಿಕೊಳ್ಳುವುದಿಲ್ಲ ಎಂದು ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಗೆ ಎಐಎಡಿಎಂಕೆ ಪಕ್ಷಕ್ಕೆ ಮತ್ತೆ ಎಂಟ್ರಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮದವರು ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ವಿಚಾರದ ಬಗ್ಗೆ ಕೇಳಿದಾಗ  ‘ಶಶಿಕಲಾ ಮತ್ತೆ ಎಐಎಡಿಎಂಕೆ ಪಕ್ಷಕ್ಕೆ ಬರುವ ಸಾಧ್ಯತೆಯೇ ಇಲ್ಲ. ಅವರು ನಮ್ಮ ಪಕ್ಷದಲ್ಲಿ ಇಲ್ಲ’ ಎಂದಿದ್ದಾರೆ  ಪಳನಿಸ್ವಾಮಿ. ಈಗಾಗಲೇ ಜಯಲಲಿತಾ ಆಪ್ತೆ ಶಶಿಕಲಾರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಸಲಾಗಿದೆ. ಆದರೆ ಶಶಿಕಲಾ ಮತ್ತೆ ಎಐಎಡಿಎಂಕೆ ಪಕ್ಷವನ್ನು ತಮ್ಮ ನಿಯಂತ್ರಣಕ್ಕೇ ತೆಗೆದುಕೊಳ್ಳಲು ಯತ್ನಿಸುವ ಸಾಧ್ಯತೆ ಇರುವುದರಿಂದ ಸಿಎಂ ಪಳನಿಸ್ವಾಮಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

2021 ರ ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಆ ಕಾರಣ ಶಶಿಕಲಾ ರಾಜಕಾರಣ ಹೊಸ ಅಧ್ಯಾಯದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.

error: Content is protected !!