ಇಂದು CWC ಸಭೆ ನಡೆಯಲಿದೆ. ಈ ಸಭೆಯ ಬಳಿಕ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಗಳಿವೆ ರಾಹುಲ್ ಗಾಂಧಿ ಅಧ್ಯಕ್ಷರಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಇದನ್ನು ಓದಿ –ಬೊಮ್ಮಾಯಿ ಸರ್ಕಾರದ ವಿರುದ್ಧ ಮತ್ತೆ 40% ಕಮೀಷನ್ ಗುಮ್ಮ : ಮೋದಿಗೆ ಪತ್ರ ಬರೆಯಲು ನಿರ್ಧಾರ
ಈ ಹಿಂದೆ ಘೋಷಣೆ ಮಾಡಿದಂತೆ ಆಗಸ್ಟ್ 22ರಿಂದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಬೇಕಿತ್ತು. ರಾಹುಲ್ ಗಾಂಧಿ ಅವರಿಗೆ ಮತ್ತೆ ಅಧಿಕಾರ ವಹಿಸಿಕೊಳ್ಳಲು ಕೆಲವು ಹಿರಿಯ ನಾಯಕರು ಮನವಿ ಮಾಡಿದ್ದರು. ಆದರೆ ರಾಹುಲ್ ಗಾಂಧಿ ನಿರಾಕರಿಸಿದ ಹಿನ್ನಲೆ ಚುನಾವಣೆ ಘೋಷಣೆ ವಿಳಂಬವಾಗಿದೆ.
ರಾಹುಲ್ ಗಾಂಧಿ ನಿರಾಕರಣೆ ಹಿನ್ನಲೆ ಪಕ್ಷದಲ್ಲಿ ಹಿರಿಯರಾಗಿರುವ ಹಾಗೂ ಸಿಎಂ ಸ್ಥಾನದಲ್ಲಿರುವ ಅಶೋಕ್ ಗೆಹ್ಲೋಟ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಚಿಂತನೆಗಳು ನಡೆದಿವೆ. ಈ ಸಂಬಂಧ ಸೋನಿಯಾಗಾಂಧಿ ಕೂಡಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಅಶೋಕ್ ಗೆಹ್ಲೋಟ್‌ಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ ಸಿಎಂ ಸ್ಥಾನ ಖಾಲಿಯಾಗಲಿದ್ದು, ಈ ಜಾಗಕ್ಕೆ ಸಚಿನ್ ಪೈಲಟ್ ಅವರನ್ನು ಆಯ್ಕೆ ಮಾಡಿದ್ದಲ್ಲಿ ರಾಜಸ್ಥಾನ ರಾಜಕೀಯದಲ್ಲಿರುವ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹಾಕಿಕೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ಅಂಬಿಕಾ ಸೋನಿ ಅವರ ಹೆಸರು ಕೇಳಿ ಬಂದಿದೆ. ಸೋನಿಯಾಗಾಂಧಿ ಅತ್ಯಾಪ್ತೆ ಹಾಗೂ ಹಿರಿಯ ನಾಯಕಿಯಾಗಿರುವುದರಿಂದ ಅವರ ಹೆಸರು ರೇಸ್ ನಲ್ಲಿ ಕೇಳಿ ಬಂದಿದೆ. ಆದರೆ ಅವರಿಗೆ ವಯಸ್ಸು, ಅನಾರೋಗ್ಯದ ಕಾರಣ ಅವರು ಈ ಆಫರ್ ಒಪ್ಪಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ