January 8, 2025

Newsnap Kannada

The World at your finger tips!

ganesh 11

ವಯಸ್ಸು ಕೇವಲ 23- ಬರೋಬರಿ 11 ಹುಡುಗಿಯರನ್ನು ಮದುವೆಯಾಗಿ ವಂಚಿಸಿದಾತನ ಬಂಧನ

Spread the love

ಈತನಿಗೆ ಕೇವಲ 23 ವರ್ಷ. ಈ ವಯಸ್ಸಿನಲ್ಲಿ ಆಡಬಾರದ ಆಟಗಳನ್ನು ಆಡಿ ಈಗ ಪೋಲಿಸರ ಅತಿಥಿಯಾಗಿ ದ್ದಾನೆ.

ಈತ ಮಾಡಿದ ಘನ ಕಾರ್ಯ ಎಂದರೆ ಒಬ್ಬರಿಗೆ ಗೊತ್ತಾಗದಂತೆ ಮತ್ತೊಬ್ಬಳನ್ನು ಮದುವೆಯಾಗುವುದು ಈತನ ಖಯಾಲಿ. ಹಾಗಂತ ಈತ ಮದುವೆ ಯಾಗಿರುವುದು ಬರೋಬರಿ 11 ಜನ ಹುಡುಗಿಯರನ್ನು.

ಚೆನ್ನೈ ನ ವೆಲ್ಲಿ ವಕ್ಕಂ ನಿವಾಸಿ ಗಣೇಶ್ ಕೊಳತ್ತೂರು ನಿವಾಸಿ ಕವಿತಾ ಪ್ರೀತಿಸಿ, ಕಳೆದ ಡಿ 5 ರಂದು ಆಕೆಯ ಪೋಷಕರಿಗೆ ಗೊತ್ತಾಗದ ರೀತಿಯಲ್ಲಿ ಓಡಿ ಹೋಗಿ ಮದುವೆಯಾಗುತ್ತಾನೆ. ಇತ್ತ ಯುವತಿ ಪೋಷಕರು ವೆಲ್ಲಿವಕ್ಕಂ ಪೋಲಿಸರಿಗೆ ಯುವತಿ ನಾಪತ್ತೆ ಪ್ರಕರಣದ ದೂರು ನೋಡುತ್ತಾರೆ.

ವಿಷಯ ತಿಳಿದ ಗಣೇಶ್ , ಕವಿತಾ ಜೊತೆ ಪೋಲಿಸ್ ಠಾಣೆಗೆ ಬಂದು ಮದುವೆಯಾದ ಸಂಗತಿ ವಿವರಿಸುತ್ತಾನೆ. ಕವಿತಾ ಕೂಡ ನಾನು ಗಣೇಶ್ ನನ್ನು ಇಷ್ಟ ಪಟ್ಟು ಮದುವೆಯಾಗಿದ್ದೇನೆ ಎಂದು ಪೋಲಿಸರ ಮುಂದೆ ಹೇಳಿದಾಗ ಇಬ್ಬರೂ ಮೇಜರ್ ಆಗಿರುವುದರಿಂದ ಪೋಲಿಸರು ಪೋಷಕರಿಗೆ ಬುದ್ದಿ ಹೇಳಿ ಕಳಿಸುತ್ತಾರೆ.

ಕೆಲವು ತಿಂಗಳ ನಂತರ ಗಣೇಶ್ 17 ಪ್ರಾಯದ ಮತ್ತೊಂದು ಹುಡುಗಿಯನ್ನು ಮನೆ ಕೆಲಸಕ್ಕಾಗಿ ಕರೆದು ತರುತ್ತಾನೆ. ಆಗ‌ ಕವಿತಾ ಇದನ್ನು ವಿರೋಧಿಸಿ, ಗಲಾಟೆ ಮಾಡುತ್ತಾಳೆ.

ಹಠ ಮಾಡಿ ಈ ಹುಡುಗಿಯನ್ನು ಮನೆಯಲ್ಲೇ ಇಟ್ಟುಕೊಳ್ಳುವ ಗಣೇಶ್, ಆಕೆಯೂ ಸೇರಿದಂತೆ ಒಂದೇ ರೂಂನಲ್ಲಿ ಮೂರು ಜನ ಒಟ್ಟಾಗಿ ಮಲಗಿ ಕೊಳ್ಳುವಂತಹ ಸಂದರ್ಭ ಸೃಷ್ಟಿ ಮಾಡುತ್ತಾನೆ.

ಕವಿತಾ ಕಣ್ಣೆದುರಿನಲ್ಲೇ 17 ರ ಯುವತಿಯನ್ನು ದೈಹಿಕವಾಗಿ ಬಳಕೆ ಮಾಡಿಕೊಳ್ಳುವ ಗಣೇಶ್ ನ ವಿಕೃತಿ ಬಗ್ಗೆ ವಿರೋಧ ವ್ಯಕ್ತ ಮಾಡಿ ಗಲಾಟೆ ಮಾಡಿದಾಗ ಹೆಂಡತಿಗೆ ದೈಹಿಕ ಕಿರುಕುಳ ನೀಡಿ, ಆಕೆಯನ್ನು ರೂಂ ನಲ್ಲಿ ಕೂಡಿ ಹಾಕಿ ಹಿಂಸೆ ಮಾಡುತ್ತಾನೆ.

ನಂತರ ಕವಿತಾ ಮನೆಯ ಮಾಲೀಕರ ಸಹಾಯ ಪಡೆದು ರೂಂ ನಿಂದ ತಪ್ಪಿಸಿಕೊಂಡು ಬಂದು, ಪೋಷಕರ ಸಹಾಯದೊಂದಿಗೆ ಪೋಲಿಸರಿಗೆ ಗಣೇಶ್ ವಿರುದ್ದ ದೂರು ನೀಡುತ್ತಾಳೆ.

ಆಗ ಪೋಲಿಸರು ಗಣೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾನು ಬರೋಬರಿ 11 ಮಂದಿ ಹುಡುಗಿಯರನ್ನು ಮೋಸದಿಂದ ಮದುವೆ , ದೈಹಿಕವಾಗಿ ಬಳಕೆ ಮಾಡಿ ನಂತರ ಅವರುಗಳ ಕಣ್ಣಿಗೆ ಕಾಣದಂತೆ ತಪ್ಪಿಸಿಕೊಂಡು ಹೋಗುತ್ತಿದ್ದೆ ಎಂದು ಹೇಳಿದ್ದಾನೆ.

ಸಧ್ಯಕ್ಕೆ ಪೋಲಿಸರ ವಶದಲ್ಲಿರುವ ಗಣೇಶ್ ವಿರುದ್ದ ವಂಚನೆ ಒಳಗಾದ 11 ಮಂದಿ ಮುಂದೆ ಬಂದು ದೂರು ನೀಡಿದರೆ ಇನ್ನೂ ಕಠಿಣ ಕ್ರಮ ಜರುಗಿಸುವುದಾಗಿ ವೆಲ್ಲಾವಕ್ಕಂ‌ ಪೋಲಿಸರು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!