ಸಂಕ್ರಾಂತಿ ನಂತರ ಸಿಎಂ ಬೊಮ್ಮಾಯಿ ಸಂಪುಟದ 6 ಸಚಿವರಿಗೆ ಕೊಕ್‌?

Team Newsnap
1 Min Read
Bommai sets stage for JDS-BJP alliance during 'Loka' elections 'ಲೋಕಾ 'ಚುನಾವಣೆ ವೇಳೆಗೆ ಜೆಡಿಎಸ್ - ಬಿಜೆಪಿ ಮೈತ್ರಿಗೆ ವೇದಿಕೆ ಸಜ್ಜು - ಬೊಮ್ಮಾಯಿ

ಸಂಕ್ರಾಂತಿ ನಂತರ ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ.

ಮೂಲ ಮತ್ತು ವಲಸಿಗ ಸಚಿವರಿಗೆ ಕೊಕ್‌ ನೀಡಲು ಹೈಕಮಾಂಡ್‌ ನಿರ್ಧರಿಸಿದೆ . ಸಚಿವರ ಕಾರ್ಯವೈಖರಿ, ಕ್ರಿಯಾಶೀಲತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಸಚಿವರಿಗೆ ಗೇಟ್‌ ಪಾಸ್‌ ನೀಡುವ ಬಗ್ಗೆ ಚರ್ಚೆಯಾಗುತ್ತದೆ.

ಜನವರಿ 8, 9 ರಂದು ಹೈಕಮಾಂಡ್‌ ಸಭೆ ನಡೆಸಲಿದೆ , ಸಭೆ ಬಳಿಕ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ

6+4 ಸೂತ್ರದಡಿಯಲ್ಲಿ ಸಂಪುಟ ಪುನಾರಚನೆಯ ಯೋಜನೆ ಇದೆ. ವಲಸಿಗರಲ್ಲಿ ಮೂರು, ಮೂಲದಲ್ಲಿ ಮೂರು ಸಚಿವರು ಸಂಪುಟದಿಂದ ಹೊರ ಹೋಗಲಿದ್ದಾರೆ. ಹೊರ ಹಾಕುವ ಸಚಿವರ ಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ

ಸಂಪುಟದಿಂದ 6 ಸಚಿವರನ್ನು ಹೊರ ಹಾಕಿದರೆ ಒಟ್ಟು 10 ಸ್ಥಾನ ಖಾಲಿ ಉಳಿಯಲಿವೆ. ಆಗ ಎಲೆಕ್ಷನ್ ಕ್ಯಾಬಿನೆಟ್ ರಚಿಸಲು ಹೈಕಮಾಂಡ್ ಉತ್ಸುಕವಾಗಿದ್ದು, 10 ಸ್ಥಾನಗಳನ್ನು ತುಂಬಲು ಹೈಕಮಾಂಡ್ ಪ್ಲ್ಯಾನ್ ಮಾಡಿದೆ.

Share This Article
Leave a comment