ಆಫ್ರಿಕನ್ ಚೀತಾ ಮೈಸೂರು ಮೃಗಾಲಯದಲ್ಲಿ ವೀಕ್ಷಣೆಗೆ

Team Newsnap
2 Min Read
  • ಸಾರ್ವಜನಿಕ ವೀಕ್ಷಣೆಗೆ ಒಂದು ಗಂಡು, ಎರಡು ಹೆಣ್ಣು ಚೀತಾಗಳು
  • ಸರಳ ದಸರಾ ಆಚರಣೆ, ಕೊರೊನಾ ಹಿನ್ನೆಲೆ ಪ್ರವೇಶ ನಿರ್ಬಂಧ ಅನಿವಾರ್ಯ ಮೈಸೂರು ಮೃಗಾಲಯಕ್ಕೆ ಆಫ್ರಿಕಾದಿಂದ ಕರೆತರಲಾಗಿರುವ ಮೂರು ಚೀತಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಮೈಸೂರು ಮೃಗಾಲಯಕ್ಕೆ ಮೂರು ಹೊಸ ಚೀತಾವನ್ನು ಮೈಸೂರಿಗೆ ಕರೆತರಲಾಗಿದೆ. ದೇಶದಲ್ಲಿ ಹೈದರಾಬಾದ್ ಬಿಟ್ಟರೆ ಮೈಸೂರಿನಲ್ಲಿ ಮಾತ್ರ ಇದೆ. ಆಗಸ್ಟ್ 17 ರಂದು ಪ್ರಾಣಿ ವಿನಿಮಯ ಯೋಜನೆಯಡಿ ದಕ್ಷಿಣ ಆಫ್ರಿಕಾದಿಂದ ಒಂದು ಗಂಡು, ಎರಡು ಹೆಣ್ಣು ಚೀತಾಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ ಎಂದು ಸಚಿವರು ತಿಳಿಸಿದರು.

zoo1

ದಸರಾಗೆ ಸಿಎಂ ಚಾಲನೆ

ಸರಳ ದಸರಾವನ್ನು ಮಾತ್ರ ಆಚರಿಸಲಾಗುವುದು. ನಾಳೆ ಮೈಸೂರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಜಿಲ್ಲಾಡಾಳಿತದಿಂದ ಈಗಾಗಲೇ ಎಲ್ಲ ಸಿದ್ಧತೆಗಳು ಆಗಿವೆ. ನಾಡಿದ್ದು ಮುಖ್ಯಮಂತ್ರಿಗಳು ನಾಡಹಬ್ಬ ದಸರಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಪ್ರವಾಸಿಗರಿಗೆ ನಿರ್ಬಂಧ

ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಹೇರಲಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ತಂಡ ನೀಡಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ. ಸಾರ್ವಜನಿಕ ನಿರ್ಬಂಧ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ತಿಳಿಸಿದರು.

40 ಸಾವಿರ ಲೀಡ್ ನಿಂದ ಗೆಲ್ಲುತ್ತೇವೆ

ರಾಜರಾಜೇಶ್ವರಿ ನಗರ ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿಗಳಾದ ಮುನಿರತ್ನ ಅವರ ನಾಮಪತ್ರ ಸಲ್ಲಕೆ ವೇಳೆ ನಾನು ಉಪಸ್ಥಿತನಿದ್ದೆ. ಚುನಾವಣೆಯಲ್ಲಿ ಅವರು 30ರಿಂದ 40 ಸಾವಿರ ಲೀಡ್ ನೊಂದಿಗೆ ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನನಗೆ ದಸರಾ ಇರುವುದರಿಂದ ಎಲ್ಲ ಸಮಯ ಅಲ್ಲಿ ಇರಲು ಆಗುತ್ತಿಲ್ಲ. ರಾಜರಾಜೇಶ್ವರಿ ನಗರ ಸಹ ನನ್ನ ಕ್ಷೇತ್ರದ ಪಕ್ಕವೇ ಇರುವುದರಿಂದ ಗೆಲುವಿಗೆ ಇನ್ನಷ್ಟು ಹೆಚ್ಚಿಗೆ ಕೆಲಸ ಮಾಡಬಹುದಾಗಿದೆ ಎಂದು ಸಚಿವರು ತಿಳಿಸಿದರು.

ವಿಶ್ವನಾಥ್ ಅವರಿಗೆ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಸಿಗಲು ನಾನು ಸಹ ಬಹಳಷ್ಟು ಪ್ರಯತ್ನಪಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಗೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಹೇಳಿದರು.

Share This Article
Leave a comment