February 21, 2026

Newsnap Kannada

The World at your finger tips!

ಪ್ರಮಾಣವಚನ ಸ್ವೀಕಾರ : ನೂತನ ಸಚಿವರಿಗೆ ಕೊಠಡಿ ಹಂಚಿಕೆ

Spread the love

ಬಹುನಿರೀಕ್ಷಿತ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ, 7 ಜನ ಶಾಸಕರು ರಾಜಭವನದಲ್ಲಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ (ಮಹದೇವಪುರ), ಎಂಟಿಬಿ ನಾಗರಾಜ್ (ಪರಿಷತ್ ಸದಸ್ಯ), ಮುರುಗೇಶ್ ನಿರಾಣಿ (ಬಿಳಗಿ ಶಾಸಕ), ಆರ್.ಶಂಕರ್ (ಪರಿಷತ್ ಸದಸ್ಯ), ಸಿ.ಪಿ.ಯೋಗೇಶ್ವರ್ (ಪರಿಷತ್ ಸದಸ್ಯ) ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಪ್ರಮಾಣವಚನ ಬಳಿಕ ರಾಜ್ಯ ಸರ್ಕಾರದ ನೂತನ ಸಚಿವರಿಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ರವೀಂದ್ರ ಕೊಠಡಿ ಹಂಚಿಕೆ ಮಾಡಿದ್ದಾರೆ.

ಯಾರಿಗೆ ? ಯಾವ ಕೊಠಡಿ?

  • ಉಮೇಶ್ ಕತ್ತಿ – 329 -329ಎ – ವಿಧಾನಸೌಧ
  • ಅರವಿಂದ ಲಿಂಬಾವಳಿ – 344-344ಎ – ವಿಧಾನಸೌಧ
  • ಎಂಟಿಬಿ ನಾಗರಾಜ್ – 330-330ಎ – ವಿಧಾನಸೌಧ
  • ಮುರುಗೇಶ್ ನಿರಾಣಿ – 307-307ಎ – ವಿಧಾನಸೌಧ
  • ಸಿ.ಪಿ.ಯೋಗೇಶ್ವರ್ – 336-336ಎ – ವಿಧಾನಸೌಧ

*ಎಸ್.ಅಂಗಾರ – 252-253ಎ – ವಿಧಾನಸೌಧ

  • ಆರ್.ಶಂಕರ್ – 305-305ಎ – ವಿಧಾನಸೌಧ
error: Content is protected !!