ಮಾಡೆಲ್ ಲೋಕದ ದಿಗ್ಗಜರ ಜಾಹೀರಾತುಗಳು………
ಓ ,
ಹಾಲು ಬಿಳುಪಿನ ಸುರಸುಂದರಾಂಗಿಣಿಯೇ,
ಹಾಯ್,
ಚೆಲುವಾಂತ ಚೆನ್ನಿಗ ಮನ್ಮಥನೇ,
Fair & Lovely – Fair & Handsome ಮುಂತಾದ Beauty ಜಾಹೀರಾತುಗಳ ಸಪ್ತಲೋಕದಲ್ಲೂ ಮಿಂಚುವ ಮಾಡಲ್ ಗಳೇ,
ನಿಮ್ಮ ಸೌಂದರ್ಯಕ್ಕೆ – ಅದೃಷ್ಟಕ್ಕೆ ಅಭಿನಂದನೆಗಳು.
ಆ Product ಗಳ Brand Ambassador ಆಗಿರುವುಕ್ಕೆ ಸಂತೋಷ.
ಆದರೆ,……
ಪಕ್ಕದ ಮನೆಯ ಆ ಕಪ್ಪಗಿನ ಹುಡುಗಿಯೊಬ್ಬಳು,
ಈ ನೆಲದಲ್ಲಿ ಹುಟ್ಟಿರುವುದಕ್ಕೆ,
ತನ್ನ ನಿಯಂತ್ರಣದಲ್ಲಿಲ್ಲದ ದೇಹದ ಬಣ್ಣದ ಕಾರಣಕ್ಕಾಗಿ ತನ್ನೊಳಗೇ ಕೊರಗುತ್ತಿದ್ದಾಳೆ,
ಮೊದಲು ಅವಳಿಗೆ ಹೇಳಿ,
” ಬಣ್ಣಗಳಲ್ಲಿ ಯಾವುದು ಶ್ರೇಷ್ಠ ಎಂದು “
ಆಕರ್ಷಕ ದೇಹದ ಮಾಡಲ್ ಲೋಕದ ದೇವಾನು ದೇವತೆಗಳೇ ,
ಸೂಟು ಬೂಟಿನ ಮಿರಿಮಿರಿ ಮಿಂಚುವ ಬಟ್ಟೆಗಳ ದಿಗ್ಗಜರೇ…..
ರೈಲು ನಿಲ್ದಾಣದ ಆ ಕಲ್ಲು ಬೆಂಚಿನ ಮೇಲೆ ಅರೆ ಬಟ್ಟೆಯಲ್ಲಿ ಮಲಗಿರುವ ನಮ್ಮದೇ ಕಂದಮ್ಮಗಳಿಗೆ ಒಮ್ಮೆ ತಿಳಿ ಹೇಳಿ,
ಅವರ ಬದುಕಿನ Brand ambassador ಯಾರೆಂದು….
Shampoo – Soap – Perfume ಗಳ ಘಮಲುಗಳಲ್ಲಿ ಮುಳುಗೇಳುವ ರಾಜಕುಮಾರ ರಾಜಕುಮಾರಿಯರೇ,
ನಮ್ಮ ಹಳ್ಳಿಯ ಅಜ್ಜಿಯ ಹೇನು ಬಿದ್ದ ತಲೆಯ ಕೆರೆತ ಕಡಿಮೆಯಾಗಲು ಏನು ಮಾಡಬೇಕೆಂದು ಸ್ವಲ್ಪ ಹೇಳಿ.
ಅದಕ್ಕೂ ಪ್ರಚಾರ ರಾಯಭಾರಿಗಳಾಗುವಿರೇ .?
ಚಿನ್ನ ವಜ್ರ ಮುಂತಾದ ಒಡವೆಗಳ ರಾಯಭಾರಿಗಳೇ,
ಅಪ್ಸರೆಯರೇ,
ವಿಧವೆಯರಿಗೆ ಮಾಸಾಶನ ಅರ್ಜಿ ಎಲ್ಲಿ ಸಿಗುತ್ತದೆ , ಅದನ್ನು ಭರ್ತಿ ಮಾಡುವುದು ಹೇಗೆ ಸ್ವಲ್ಪ ತಿಳಿಸಿಕೊಡಿ.
ಅವರಿಗಾರು Brand ambassador ಗಳು.
ಏಕೆಂದರೆ ಅವರೂ ಇದೇ ನೆಲದಲ್ಲಿ ಹುಟ್ಟಿದ್ದಾರೆ. ನಿಮ್ಮಂತೆಯೇ ಗಂಡು ಹೆಣ್ಣಿನ ಮಿಲನದ ಕೂಸುಗಳು . ನಿಮ್ಮ ಹತ್ತುಪಟ್ಟು ಶಕ್ತಿ ಸಾಮರ್ಥ್ಯ ಶ್ರಮ ಪ್ರಾಮಾಣಿಕತೆ ಅವರಿಗಿದೆ.
ಆದರೆ….
ನಿಮ್ಮಂತ ಮುಖವಾಡಗಳಿಲ್ಲ.
ಅವರು ಕೇವಲ ಮನುಷ್ಯ ಜೀವಿಗಳು.
ಕಪಟ ಅರಿಯದ ಸೃಷ್ಟಿಯ ಕೂಸುಗಳು.
ಶ್ರೀಮಂತರ ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆಗಳು ಇವೆ.
ಆದರೆ ಸಂಕಷ್ಟದ ಜನರ ನೋವುಗಳನ್ನು ಆಲಿಸಲು ಇರುವುದಾದರೂ ಯಾರು ?
ಆಧುನಿಕ ಸಮಾಜದ ವಿಕೃತಿಗೆ ಅನೇಕ ಉದಾಹಾರಣೆಗಳಿವೆ. ಆದರೆ ಸಮ ಸಮಾಜದ ನಿರ್ಮಾಣಕ್ಕೆ ಇರುವ ಮಾರ್ಗಗಳು ತೋಚುತ್ತಿಲ್ಲ…….
ಜಾಹೀರಾತುಗಳಲ್ಲಿ ಸಹ ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಿದರೆ ಎಷ್ಟೊಂದು ಉಪಯುಕ್ತ ಅಲ್ಲವೇ…….
ಹುಚ್ಚು ಕನಸೆಂದು ನಗುವ ಸ್ವಾತಂತ್ರ್ಯ ನಿಮಗಿದೆ..
- ವಿವೇಕಾನಂದ. ಹೆಚ್.ಕೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್