CDS ಬಿಪಿನ್ ರಾವತ್​​ ಹೆಲಿಕಾಪ್ಟರ್​ ಪತನಕ್ಕೆ ಪ್ರತಿಕೂಲ ಹವಾಮಾನ ಕಾರಣ – ವಾಯುಪಡೆ

Team Newsnap
1 Min Read

ಡಿಸೆಂಬರ್ 8 ರಂದು ಸಿಡಿಎಸ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನದ ‘ಪ್ರಾಥಮಿಕ ತನಿಖಾ ವರದಿ’ಯನ್ನು ವಾಯುಪಡೆ ಸಾರ್ವಜನಿಕಗೊಳಿಸಿ ಪ್ರತಿಕೂಲ ಹವಾಮಾನವೇ ಪತನಕ್ಕೆ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ .

ಭಾರತೀಯ ವಾಯು ಸೇನೆ ನೀಡಿರುವ ಮಾಹಿತಿ ಪ್ರಕಾರ, ‘ಪ್ರತಿಕೂಲ ಹವಾಮಾನವೇ’ ಹೆಲಿಕಾಪ್ಟರ್ ಪತನಕ್ಕೆ ಕಾರಣ. ಹಠಾತ್ ಪ್ರತಿಕೂಲ ಹವಾಮಾನದ ಪರಿಣಾಮ ಹೆಲಿಕಾಪ್ಟರ್ ಮೋಡಗಳನ್ನು ಪ್ರವೇಶಿಸಿತು.

ಕಣಿವೆಯಲ್ಲಿನ ಹವಾಮಾನ ಪರಿಸ್ಥಿತಿಗಳಲ್ಲಿನ ಅನಿರೀಕ್ಷಿತ ಬದಲಾವಣೆಯಿಂದಾಗಿ ಕಾಪ್ಟರ್ ಮೋಡಗಳಿಗೆ ಪ್ರವೇಶಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಅಂತ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಪಿತೂರಿ ಆರೋಪವನ್ನು ತಳ್ಳಿ ಹಾಕಿರುವ ವಾಯುಪಡೆ
ಹೆಲಿಕಾಪ್ಟರ್ ಮೋಡಗಳಿಗೆ ಪ್ರವೇಶಿಸಿದ ಕೂಡಲೇ ಪೈಲೆಟ್‌ನ ಆತಂಕಕ್ಕೆ ಕಾರಣವಾಗಿದೆ.

ನಂತರ ಭೂಪ್ರದೇಶ ನಿಯಂತ್ರಿತ ಸ್ಥಳದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಕಾರಣವಾಯಿತು. ಪರಿಣಾಮ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವಾಯಸೇನೆ ತಿಳಿಸಿದೆ.

ತಾಂತ್ರಿಕ ದೋಷದಿಂದ, ಮಾನವ ನಿರ್ಮಿತ ದೋಷದಿಂದ ಅಥವಾ ಅಪಘಾತದ ಹಿಂದೆ ಪಿತೂರಿ ಇದೆ ಅನ್ನೋದನ್ನು ತನಿಖಾ ಸಮಿತಿ ತಳ್ಳಿಹಾಕಿದೆ.

Share This Article
Leave a comment