January 30, 2026

Newsnap Kannada

The World at your finger tips!

rajput

ಮಹಾರಾಷ್ಟ್ರ ಸಿಎಂ ಪುತ್ರ ಆದಿತ್ಯಾ ಠಾಕ್ರೆಗೆ ಬೆದರಿಕೆ – ಬೆಂಗಳೂರು ವ್ಯಕ್ತಿಯ ಬಂಧನ

Spread the love

ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯಾ ಠಾಕ್ರೆಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಜೈ ಸಿಂಗ್ ರಜಪೂತ್ ಬಂಧಿತ ಆರೋಪಿ. ಡಿಸೆಂಬರ್ 18 ರಂದು ಆರೋಪಿಯನ್ನು ಬಂಧಿಸಿ ಮುಂಬೈಗೆ ಕರೆ ತಂದಿದ್ದೇವೆ ಎಂದು ಮುಂಬೈ ಅಪರಾಧ ವಿಭಾಗದ ಸೈಬರ್ ತಂಡ ತಿಳಿಸಿದೆ.

ಆದಿತ್ಯಾ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಮಗ. ಈ ಆರೋಪಿಯು ಡಿಸೆಂಬರ್ 8 ರಂದು ಆದಿತ್ಯ ಠಾಕ್ರೆಗೆ ಕರೆ ಮಾಡಿದ್ದಾನೆ. ಆದರೆ ಆ ಕರೆಯನ್ನು ಅವರು ತೆಗೆದಿಲ್ಲ. ನಂತರದಲ್ಲಿ ಆರೋಪಿಯು ಸಚಿವರಿಗೆ ಬೆದರಿಕೆಯ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್ ಪೊಲೀಸ್ ತಂಡವು ತನಿಖೆ ನಡೆಸಿದಾಗ ಆರೋಪಿಯು ಬೆಂಗಳೂರಿನಿಂದ ಕರೆ ಮಾಡಿರುವುದು ಗೊತ್ತಾಗಿದೆ. ಈ ಆಧಾರದಲ್ಲಿ ಜಾಡು ಹಿಡಿದು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆ ವ್ಯಕ್ತಿಯನ್ನು ಹುಡುಕಿಕೊಂಡು ಪೊಲೀಸರು ಬೆಂಗಳೂರಿಗೆ ಬಂದಿದ್ದಾರೆ ಎಂದರು.

error: Content is protected !!