Categories: Main News

ಆದಿಚುಂಚನಗಿರಿ ಶ್ರೀಗಳ, ನನ್ನ ಫೋನ್ ಕದ್ದಾಲಿಕೆ ನಡೆದಿದೆ – ಸುಮಲತಾ

ಸ್ಯಾಂಡಲ್​ವುಡ್​ ಸ್ಮಗ್ಲರ್’​ ಟ್ಯಾಗ್​ ಕೊಟ್ಟು ನನ್ನ ಹಾಗೂ ಆದಿ ಚುಂಚನಗಿರಿ ಶ್ರೀಗಳ ದೂರವಾಣಿ ಯನ್ನು ಕದ್ದಾಲಿಸಲಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅತ್ಯಂತ ಗಂಭೀರ ಆರೋಪ ಮಾಡಿದರು.‌

ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ಈ ಕುರಿತಂತೆ ಸಿಬಿಐ ಅಧಿಕಾರಿಗಳು ತೋರಿಸಿದ ದಾಖಲೆ ನೋಡಿ ಶಾಕ್​ ಆಗಿದೆ. ನನಗೆ ಯಾರು ಕರೆಮಾಡಿದ್ದರು, ನಾನು ಯಾರಿಗೆ ಕರೆ ಮಾಡಿದ್ದೆ, ಎಷ್ಟು ಜನರ ಜತೆ ಮಾತಾಡಿದ್ದೆ ಎಂದು ದಾಖಲೆ ತೋರಿಸಿದಾಗ ಶಾಕ್ ಆಯಿತು ಎಂದರು‌.‌

ಸ್ಯಾಂಡಲ್​ವುಡ್​ ಸ್ಮಗ್ಲರ್ ಟ್ಯಾಗ್ ಕೊಟ್ಟು ಫೋನ್​ ಟ್ಯಾಪ್ ಮಾಡಲಾಗಿದೆ. ​ಯಾರ ಜತೆ ಮಾತನಾಡುವಾಗ ಟ್ಯಾಪ್​ ಆಗಿದೆ ಎಂದು ದಾಖಲೆಯಿದೆ. ನನ್ನ ದೂರವಾಣಿ ಸೇರಿದಂತೆ ಹಲವರ ದೂರವಾಣಿ ಟ್ಯಾಪ್ ಮಾಡಲಾಗಿದೆ ಎಂದರು.

ರವೀಂದ್ರ ನದ್ದು ಕ್ರಿಮಿನಲ್ ಮೈಂಡ್ :

ರವೀಂದ್ರ ಶ್ರೀಕಂಠಯ್ಯ ಬಾಯಿಬಿಟ್ಟರೆ ಬರೀ ಸುಳ್ಳು ಹೇಳುತ್ತಾರೆ. ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಂಬರೀಶ್ ಸೋತಿದ್ದರು. 2 ಬಾರಿ ಅಲ್ಲ, ಕುತಂತ್ರದಿಂದ ಒಂದು ಬಾರಿ ಸೋತಿದ್ದರು. ನನ್ನ ವಿರುದ್ಧ 2 ಬಾರಿ ಸೋತಿದ್ದರು ಎಂದು ಸುಳ್ಳು ಹೇಳ್ತಿದ್ದಾರೆ. ಕುತಂತ್ರ ಮಾಡಿ ಅಂಬರೀಶ್​ರನ್ನು ಒಮ್ಮೆ ಸೋಲಿಸಿದ್ದರು. ‘ರವೀಂದ್ರ ಶ್ರೀಕಂಠಯ್ಯ ಕ್ರಿಮಿನಲ್ ಮೈಂಡ್​ ವ್ಯಕ್ತಿಯಿದ್ದಾರೆ ಎಂದು ಸುಮಲತಾ ಕುಟುಕಿದರು.‌

ಮಂಡ್ಯದಲ್ಲಿ ಭ್ರಷ್ಟಾಚಾರದ ಕಾಂಟ್ರ್ಯಾಕ್ಟ್​ ತೆಗೆದುಕೊಂಡಿದ್ದಾರೆ. ಒಂದು ಅಪರಾಧ ಮುಚ್ಚಿಕೊಳ್ಳಲು ಮತ್ತೊಂದು ಅಪರಾಧ ನಡೆಸಿ ಅಪರಾಧಗಳ ಸರಮಾಲೆಯನ್ನೇ ಮುಂದುವರಿಸುತ್ತಿದ್ದಾರೆ. ನಿಮ್ಮ ನಾಯಕರೇ ಭ್ರಷ್ಟಾಚಾರದ ಬಹುದೊಡ್ಡ ನಾಯಕರಿದ್ದಾರೆ. ಅಂಬರೀಶ್​ ವ್ಯಕ್ತಿತ್ವವೇನು, ಇವರ ವ್ಯಕ್ತಿತ್ವವೇನು ಎಂದು ಗೊತ್ತಿದೆ. ಅಂಬರೀಶ್​ ಜತೆ ಹೋಲಿಸಿಕೊಳ್ಳಬೇಡಿ ಎಂದು ಸಂಸದೆ ಸುಮಲತಾ ಅಂಬರೀಶ್ ನೇರ ತಾಕೀತು ಮಾಡಿದ್ದಾರೆ.

ಪ್ರತಾಪ್ ಸಿಂಹ ಬಗ್ಗೆಯೂ ಟೀಕೆ:

ಚುನಾವಣೆಗೆ ಸ್ಪರ್ಧಿಸಿದಾಗಲೇ ರೈತರಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುವುದಾಗಿ ಭರವಸೆ ಮತ್ತು ಗಣಿಗಾರಿಕೆ ನಿಲ್ಲಿಸಿ ರಕ್ಷಣೆ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದೆ. ಮತ್ತೊಬ್ಬ ಸಂಸದರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅವರೇನು ಬೆಂಗಳೂರು-ಮೈಸೂರು ನಡುವೆ ಬುಲೆಟ್​ ಟ್ರೇನ್ ಬಿಡಿಸಿದ್ದಾರಾ? ಅವರ ಕ್ಷೇತ್ರದಲ್ಲಿ 2 ರೋಡ್​ ರೆಡಿ ಮಾಡಿಸಿಲ್ಲ ಎಂದು ಅವರು ಸಂಸದ ಪ್ರತಾಪ್ ಸಿಂಹರನ್ನು ತರಾಟೆ ತೆಗೆದುಕೊಂಡಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024