ಸ್ಯಾಂಡಲ್ವುಡ್ ಸ್ಮಗ್ಲರ್’ ಟ್ಯಾಗ್ ಕೊಟ್ಟು ನನ್ನ ಹಾಗೂ ಆದಿ ಚುಂಚನಗಿರಿ ಶ್ರೀಗಳ ದೂರವಾಣಿ ಯನ್ನು ಕದ್ದಾಲಿಸಲಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅತ್ಯಂತ ಗಂಭೀರ ಆರೋಪ ಮಾಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ಈ ಕುರಿತಂತೆ ಸಿಬಿಐ ಅಧಿಕಾರಿಗಳು ತೋರಿಸಿದ ದಾಖಲೆ ನೋಡಿ ಶಾಕ್ ಆಗಿದೆ. ನನಗೆ ಯಾರು ಕರೆಮಾಡಿದ್ದರು, ನಾನು ಯಾರಿಗೆ ಕರೆ ಮಾಡಿದ್ದೆ, ಎಷ್ಟು ಜನರ ಜತೆ ಮಾತಾಡಿದ್ದೆ ಎಂದು ದಾಖಲೆ ತೋರಿಸಿದಾಗ ಶಾಕ್ ಆಯಿತು ಎಂದರು.
ಸ್ಯಾಂಡಲ್ವುಡ್ ಸ್ಮಗ್ಲರ್ ಟ್ಯಾಗ್ ಕೊಟ್ಟು ಫೋನ್ ಟ್ಯಾಪ್ ಮಾಡಲಾಗಿದೆ. ಯಾರ ಜತೆ ಮಾತನಾಡುವಾಗ ಟ್ಯಾಪ್ ಆಗಿದೆ ಎಂದು ದಾಖಲೆಯಿದೆ. ನನ್ನ ದೂರವಾಣಿ ಸೇರಿದಂತೆ ಹಲವರ ದೂರವಾಣಿ ಟ್ಯಾಪ್ ಮಾಡಲಾಗಿದೆ ಎಂದರು.
ರವೀಂದ್ರ ನದ್ದು ಕ್ರಿಮಿನಲ್ ಮೈಂಡ್ :
ರವೀಂದ್ರ ಶ್ರೀಕಂಠಯ್ಯ ಬಾಯಿಬಿಟ್ಟರೆ ಬರೀ ಸುಳ್ಳು ಹೇಳುತ್ತಾರೆ. ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಂಬರೀಶ್ ಸೋತಿದ್ದರು. 2 ಬಾರಿ ಅಲ್ಲ, ಕುತಂತ್ರದಿಂದ ಒಂದು ಬಾರಿ ಸೋತಿದ್ದರು. ನನ್ನ ವಿರುದ್ಧ 2 ಬಾರಿ ಸೋತಿದ್ದರು ಎಂದು ಸುಳ್ಳು ಹೇಳ್ತಿದ್ದಾರೆ. ಕುತಂತ್ರ ಮಾಡಿ ಅಂಬರೀಶ್ರನ್ನು ಒಮ್ಮೆ ಸೋಲಿಸಿದ್ದರು. ‘ರವೀಂದ್ರ ಶ್ರೀಕಂಠಯ್ಯ ಕ್ರಿಮಿನಲ್ ಮೈಂಡ್ ವ್ಯಕ್ತಿಯಿದ್ದಾರೆ ಎಂದು ಸುಮಲತಾ ಕುಟುಕಿದರು.
ಮಂಡ್ಯದಲ್ಲಿ ಭ್ರಷ್ಟಾಚಾರದ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದಾರೆ. ಒಂದು ಅಪರಾಧ ಮುಚ್ಚಿಕೊಳ್ಳಲು ಮತ್ತೊಂದು ಅಪರಾಧ ನಡೆಸಿ ಅಪರಾಧಗಳ ಸರಮಾಲೆಯನ್ನೇ ಮುಂದುವರಿಸುತ್ತಿದ್ದಾರೆ. ನಿಮ್ಮ ನಾಯಕರೇ ಭ್ರಷ್ಟಾಚಾರದ ಬಹುದೊಡ್ಡ ನಾಯಕರಿದ್ದಾರೆ. ಅಂಬರೀಶ್ ವ್ಯಕ್ತಿತ್ವವೇನು, ಇವರ ವ್ಯಕ್ತಿತ್ವವೇನು ಎಂದು ಗೊತ್ತಿದೆ. ಅಂಬರೀಶ್ ಜತೆ ಹೋಲಿಸಿಕೊಳ್ಳಬೇಡಿ ಎಂದು ಸಂಸದೆ ಸುಮಲತಾ ಅಂಬರೀಶ್ ನೇರ ತಾಕೀತು ಮಾಡಿದ್ದಾರೆ.
ಪ್ರತಾಪ್ ಸಿಂಹ ಬಗ್ಗೆಯೂ ಟೀಕೆ:
ಚುನಾವಣೆಗೆ ಸ್ಪರ್ಧಿಸಿದಾಗಲೇ ರೈತರಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುವುದಾಗಿ ಭರವಸೆ ಮತ್ತು ಗಣಿಗಾರಿಕೆ ನಿಲ್ಲಿಸಿ ರಕ್ಷಣೆ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದೆ. ಮತ್ತೊಬ್ಬ ಸಂಸದರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅವರೇನು ಬೆಂಗಳೂರು-ಮೈಸೂರು ನಡುವೆ ಬುಲೆಟ್ ಟ್ರೇನ್ ಬಿಡಿಸಿದ್ದಾರಾ? ಅವರ ಕ್ಷೇತ್ರದಲ್ಲಿ 2 ರೋಡ್ ರೆಡಿ ಮಾಡಿಸಿಲ್ಲ ಎಂದು ಅವರು ಸಂಸದ ಪ್ರತಾಪ್ ಸಿಂಹರನ್ನು ತರಾಟೆ ತೆಗೆದುಕೊಂಡಿದ್ದಾರೆ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ