ಮಾದಕ ವಸ್ತು ಮಾರಾಟ ಪ್ರಕರಣದ ಆರೋಪಿ, ‘ಬಿಗ್ ಬಾಸ್’ ಸ್ಪರ್ಧಿ ಆ್ಯಡಂ ಪಾಷಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೈಡ್ರಾಮಾ ಶುರು ಮಾಡಿದ್ದಾನೆ. ತನ್ನನ್ನು ರಾಗಿಣಿ ಸೆಲ್ ನಲ್ಲಿ ಇರಿಸಬೇಕೆಂದು ಆ್ಯಡಂ ಪಟ್ಟು ಹಿಡಿದಿದ್ದಾನೆ.
ನ್ಯಾಯಾಲಯದ ವಾರೆಂಟ್ ಪ್ರಕಾರ ಪುರುಷ ಅಂತಿರೋ ಆ್ಯಡಂನನ್ನು ಆತ ಜೈಲಿಗೆ ಬಂದಾಗ ಯಾವ ಸೆಲ್ ನಲ್ಲಿ ಇರಿಸಬೇಕೆಂದು ಚರ್ಚೆ ನಡೆದಿತ್ತು. ಮಹಿಳೆಯರಂತೆ ಬಟ್ಟೆ ಧರಿಸೋ ಆತನನ್ನು ಪುರುಷರ ಸೆಲ್ ನಲ್ಲಿ ಇಡೋಕೆ ಜೈಲಾಧಿಕಾರಿಗಳು ಸಿದ್ಧರಿರಲಿಲ್ಲ. ಆದರೆ ನಾನು ಹೆಣ್ಣಲ್ಲ. ಲಿಂಗ ಬದಲಾವಣೆ ಮಾಡಿಕೊಂಡಿಲ್ಲ ಎಂದಿದ್ದರಿಂದ ಆತನನ್ನು ಮಹಿಳೆಯರ ಸೆಲ್ ನಲ್ಲಿ ಇಡೋಕೆ ಅಧಿಕಾರಿಗಳಿಗೆ ಧೈರ್ಯವಿರಲಿಲ್ಲ.
ಹಾಗಂತ ನಾನು ಮಂಗಳಮುಖಿಯಲ್ಲ ಎಂದಿದ್ದರಿಂದ ಮಂಗಳಮುಖಿಯರ ಸೆಲ್ ನಲ್ಲೂ ಆ್ಯಡಂಗೆ ಜಾಗವಿರಲಿಲ್ಲ. ಕೊನೆಗೆ ಕಿರಿಕಿರಿ ಬೇಡ ಎಂದುಕೊಂಡ ಪೋಲೀಸರು ಆತನನ್ನು ನ್ಯಾಯಾಲಯದ ವಾರೆಂಟ್ ಆಧರಿಸಿ ಪುರುಷರ ಸೆಲ್ ನಲ್ಲೇ ಇಟ್ಟಿದ್ದರು.
ಆದರೆ ಇದಕ್ಕೂ ಖ್ಯಾತೆ ತೆಗೆದ ಆ್ಯಡಂ ತನನ್ನು ರಾಗಿಣಿ ಸೆಲ್ ಗೆ ಬದಲಾಯಿಸುವಂತೆ ಗಲಾಟೆ ಆರಂಭಿಸಿದ್ದಾನೆ ಎನ್ನಲಾಗಿದೆ.
ಆ್ಯಡಂನ ಈ ಹುಚ್ಚಾಟದಿಂದ ಬೇಸತ್ತ
ಅಧಿಕಾರಿಗಳು ಈಗ ಆತನನ್ನು ಜೈಲಿನಲ್ಲಿರೋ ಹಾಸ್ಪಿಟಲ್ ನ ಪ್ರತ್ಯೇಕ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ. ಆದರೂ ಆತ ತನ್ನ ಹುಚ್ಚಾಟ ಬಿಡದೆ ತನ್ನನ್ನು ರಾಗಿಣಿ ಸೆಲ್ ಗೆ ಹಾಕಿ ಎಂದು ಹಠ ಹಿಡಿದ್ದಾನೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ