ತೆಲುಗು, ತಮಿಳಿನ ನಟಿ ತಮನ್ನಾ ಕೋವಿಡ್‌ನಿಂದ ಗುಣಮುಖರಾಗಿ, ಇಂದು ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಅಕ್ಟೋಬರ್ 5ರಂದು ಕೊರೋನಾ ಸೋಂಕು ಅವರಿಗೆ ಧೃಡಪಟ್ಟಿತ್ತು. ಆಗ ಅವರು ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು.
ತಾವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಮನೆಗೆ ಹೋಗುತ್ತಿರುವ ಮುನ್ನ ಅವರು ತಮಗೆ ಚಿಕಿತ್ಸೆ ನೀಡಿ, ಗುಣಮುಖರನ್ನಾಗಿ ಮಾಡಿದ ಕಾಂಟಿನೆಂಟಲ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಈ ಕುರಿತು ವೈದ್ಯರೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್‌ಗೆ ಹಾಕಿಕೊಂಡಿರುವ ಅವರು ‘ಕಾಂಟಿನೆಂಟಲ್ ಆಸ್ಪತ್ರೆಯವೈದ್ಯಕೀಯ ಸಿಬ್ಬಂದಿಗಳಿಗೆ ಕೃತಜ್ಞತೆ ಹೇಳಲು ಪದಗಳು ಸಿಗುತ್ತಿಲ್ಲ. ನಾನು ಜ್ಚರ, ಭಯದಿಂದ ಬಳಲಿದ್ದೆ. ವೈದ್ಯರು ಮತ್ತು ಸಿಬ್ಬಂದಿಗಳ ನೀಡಿದ ಧೈರ್ಯ, ತೋರಿದ ಪ್ರಾಮಾಣಿಕ ಕಾಳಜಿಯಂದ ಗುಣಮುಖಳಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ