ಬಹುಭಾಷಾ ತಾರೆ ಸ್ನೇಹಾಗೆ ಉದ್ಯಮಿಗಳಿಂದ ಲಕ್ಷಾಂತರ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ.
ಸಿನಿಮಾಗಳಲ್ಲಿ ಸಂಭಾವನೆ ರೂಪದಲ್ಲಿ ಬಂದ ಹಣವನ್ನು ಸ್ನೇಹ ಇಬ್ಬರು ಉದ್ಯಮಿಗಳ ಬಳಿ ಹೂಡಿಕೆ ಮಾಡಿದ್ದು, ಸಮಯಕ್ಕೆ ಸರಿಯಾಗಿ ಲಾಭದ ಮೊತ್ತವನ್ನು ನೀಡುವುದಾಗಿ ಉದ್ಯಮಿಗಳು ನಂಬಿಸಿ ಮೋಸ ಮಾಡಿದ್ದಾರೆ ಎಂದು ಸ್ನೇಹಾ ಆರೋಪಿಸಿದ್ದಾರೆ.
ಹಾಕಿದ್ದ ಬಂಡವಾಳವನ್ನು ಉದ್ಯಮಿಗಳಿಗೆ ಮರಳಿಸುವಂತೆ ಕೇಳಿದಾಗ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸದ್ಯ ಹೂಡಿಕೆ ಮಾಡಿದ ಅಸಲಿ ಹಣವು ಇಲ್ಲ ಮತ್ತು ಲಾಭ ಕೂಡ ಇಲ್ಲದೇ ಉದ್ಯಮಿಗಳ ವಿರುದ್ಧ ನಟಿ ಮೋಸ ಮಾಡಿದ್ದಾರೆಂದು ಚೆನ್ನೈ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.
ನಟಿ ಸ್ನೇಹಾ ಬಹುಭಾಷಾ ತಾರೆಯಾಗಿದ್ದು ಕನ್ನಡದ ‘ಶಾಸ್ತ್ರೀ’, ‘ಕುರುಕ್ಷೇತ್ರ’, ‘ರವಿಮಾಮಾ’ ಸೇರದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚಿಗೆ ಸಿನಿಮಾ ಆಯ್ಕೆಗಳಲ್ಲಿ ತುಂಬಾ ಚ್ಯೂಸಿಯಾಗಿರುವ ಅವರು ಸದ್ಯ ತಮಿಳಿನ ‘ಶಾಟ್ ಭೂತ್-3’ ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್