ಕನ್ನಡ ಚಿತ್ರದಲ್ಲಿ ನಟಿಸಿದ್ದ ತೆಲುಗಿನ ಶ್ವೇತಾ ಕುಮಾರಿ ಹಾಗೂ ಡ್ರಗ್ ಪೆಡ್ಲರ್ ಚಾಂದ್ ಶೇಖ್ ಎಂಬಾತನನ್ನು ಡ್ರಗ್ಸ್ ಪ್ರಕರಣದಲ್ಲಿ ಮುಂಬಯಿ ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕನ್ನಡದ ರಿಂಗ್ ಮಾಸ್ಟರ್ ಚಿತ್ರದಲ್ಲಿ ನಟಿಸಿದ್ದ ಶ್ವೇತಾ ಕುಮಾರಿ ಮುಂಬಯಿ ಹೋಟೆಲ್ ಡ್ರಗ್ ಪೆಡ್ಲರ್ ಜೊತೆಯಲ್ಲಿ ಇರುವಾಗಲೇ ಬಂಧಿಸಲಾಗಿದೆ.
ನಟಿ ಶ್ವೇತಾ ಕುಮಾರಿ ಬಂಧನ ನಂತರ ಕನ್ನಡ ಮತ್ತು ತೆಲುಗಿನ ಅನೇಕ ನಟ ನಟಿಯರಿಗೆ ಎದೆ ನಡುಕ ಶುರುವಾಗಿದೆ.
ಈ ಪ್ರಕರಣದ ಮತ್ತೊಬ್ಬ ಆರೋಪಿ ಕರೀಂ ನಾಪತ್ತೆಯಾಗಿದ್ದಾನೆ. ಆತನ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಮುಂಬಯಿನ ಮಾದಕ ವಸ್ತುಗಳ ನಿಯಂತ್ರಣ ( ಎನ್ ಸಿಬಿ) ಪೋಲಿಸ್ ಅಧಿಕಾರಿ ಗಳು ನಟಿ ಶ್ವೇತಾ ಳನ್ನು ಹೈದ್ರಾಬಾದ್ ನಲ್ಲಿ ಬಂಧಿಸಿ ಸುಮಾರು 10 ಲಕ್ಷ ಮೌಲ್ಯದ 400 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಅದ ಮೇಲೆ ಶ್ವೇತಾ ಡ್ರಗ್ಸ್ ಜಾಲದ ಜೊತೆಯಲ್ಲಿ ಇದ್ದಳು ಎಂದು ಹೇಳಲಾಗುತ್ತದೆ.
ಆ್ಯಂಕರ್ ಅನುಶ್ರೀ ಜೊತೆಯಲ್ಲಿ ಕೂಡ ಶ್ವೇತಾ ನಟಿಸಿದ್ದಳು. ಅಲ್ಲದೇ ಈಕೆಗೆ ಭೂಗತ ಲೋಕದ ಜೊತೆಗೂ ನಂಟಿತ್ತು ಎಂದು ಹೇಳಲಾಗುತ್ತದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ