ಅಶ್ಲೀಲ ನೀಲಿ ಸಿನಿಮಾಗಳ ನಿರ್ಮಾಣ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಪೊಲೀಸ್ ಕಸ್ಟಡಿಯನ್ನು ಜುಲೈ 27ರ ವರೆಗೂ ನ್ಯಾಯಾಲಯ ವಿಸ್ತರಿಸಿದೆ.
ಪ್ರಕರದಲ್ಲಿ ಬಂಧಿತವಾಗಿರುವ ರಾಜ್ ಕುಂದ್ರಾ ಹಾಗೂ ಐಟಿ ಮುಖ್ಯಸ್ಥ ರಿಯಾನ್ ಥಾರ್ಪ್ ನನ್ನು ಇಂದು ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಪೊಲೀಸರು ಹಾಜರು ಪಡಿಸಿದ್ದರು.
ಈ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಪೊಲೀಸರು, ಅಶ್ಲೀಲ ಸಿನಿಮಾ ಮೂಲಕ ಬಂದ ಹಣವನ್ನು ಅನ್ಲೈನ್ ಬೆಟ್ಟಿಂಗ್ ಆಡಲು ಬಳಸಿಕೊಳ್ಳುತ್ತಿದ್ದ ಆರೋಪ ಇದೆ.
ಆರೋಪಿ ರಾಜ್ ಕುಂದ್ರಾ ಹಾಗೂ ಯೆಸ್ ಬ್ಯಾಂಕ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಆಫ್ರಿಕಾ ಖಾತೆಗಳ ಹಣ ಸಂದಾಯವಾಗಿರುವ ಮಾಹಿತಿ ಬಗ್ಗೆ ತನಿಖೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೋಲಿಸರಿಗೆ ಲಂಚ :
ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಮುಂಬೈ ಪೊಲೀಸರಿಗೆ 25 ಲಕ್ಷ ರೂಪಾಯಿ ಲಂಚ ನೀಡಲು ಕುಂದ್ರಾ ಮುಂದಾಗಿದ್ದರು ಎಂದು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಹೇಳಿದ್ದರು.
70 ನೀಲಿ ಚಿತ್ರ ಗಳು ಪತ್ತೆ :
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮನೆ ಮೇಲೆ ದಾಳಿ ಮಾಡಿದಾಗ 70 ನೀಲಿ ಚಿತ್ರಗಳು ಸಿಕ್ಕವೂ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಮಾಜಿ ಆಪ್ತ ಸಹಾಯಕ ಉಮೇಶ್ ಕಾಮತ್ ಇತರೆ ಪ್ರೊಡಕ್ಷನ್ ಹೌಸ್ನೊಂದಿಗೆ ಸೇರಿಕೊಂಡು ಈ 70 ನೀಲಿ ಚಿತ್ರಗಳನ್ನು ಮಾಡಿದ್ದರು ಎನ್ನಲಾಗಿದೆ.
ನೀಲಿ ಚಿತ್ರಗಳ ತಯಾರಿಕೆಯಿಂದ ಇದುವರೆಗೆ ಸುಮಾರು 7.5ಕೋಟಿ ರೂಪಾಯಿಗಳಿಗೂ ಅಧಿಕ ಹಣ ತನ್ನ ವಿವಿಧ ಖಾತೆಗಳಿಗೆ ಜಮಾವಣೆಯಾಗಿದೆ. ಈತ ಇದರಿಂದ ಪ್ರತಿದಿನ ಲಕ್ಷಗಟ್ಟಲೆ ಆದಾಯ ಸಂಪಾದಿಸುತ್ತಿದ್ದ. ಸುಮಾರು 6-8 ಕೋಟಿ ರೂಪಾಯಿಗಳು ದಿನನಿತ್ಯ ಆದಾಯ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
- ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
- ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ
- ಸಂಕ್ರಾಂತಿ….
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ