ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಪಾರ್ಥ ಚಟರ್ಜಿ ಲಾಕ್ ಆಗಿದ್ದಾರೆ. ಈ ನಡುವೆ ಪ್ರಕರಣ ವಿಚಾರಣೆಗೆ ವೇಗ ತುಂಬಿರುವ ಇ.ಡಿ ಅಧಿಕಾರಿಗಳು ಅರ್ಪಿತಾ ಬಳಿ ಇದ್ದ ಮೂರು ಕಾರುಗಳು ನಾಪತ್ತೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಅರ್ಪಿತಾ ಕಾಂಪ್ಲೆಕ್ಸ್ನ ಪಾರ್ಕಿಂಗ್ನಿಂದ ಆಡಿ ಎ4, ಮರ್ಸಿಡಿಸ್ ಬೆಂಜ್, 2 ಹೋಂಡಾ CRV ನಾಲ್ಕು ಕಾರುಗಳು ಪಾರ್ಕಿಂಗ್ ಸ್ಥಳದಿಂದ ನಾಪತ್ತೆಯಾಗಿದೆ. ಸುಂದರಿಯ ನಾಲ್ಕು ಕಾರುಗಳಲ್ಲಿ ಝಣ ಝಣ ಕಾಂಚಾಣ ಇರೋ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ನಟಿ ಅರ್ಪಿತಾ ನಿರ್ದೇಶಕಿಯಾಗಿರುವ ಸಿಂಬಿಯೋಸಿಸ್ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್, ಸೆಂಟ್ರಿ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಅರ್ಪಿತಾ ಎಚಯ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸೇರಿ ಮೂರು ಕಂಪನಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಈ ಕಂಪನಿಗಳಲ್ಲಿ ಆಕೆಯ ಸೋದರ ಮಾವ ಕಲ್ಯಾಣ್ ಧರ್ ಕೂಡ ನಿರ್ದೇಶಕರಾಗಿದ್ದಾರೆ.
ಅರ್ಪಿತಾ ಮುಖರ್ಜಿಯ 4 ವಾಹನಗಳಿಗಾಗಿ ಇ.ಡಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ. ಕೋಲ್ಕತ್ತದ ಡೈಮಂಡ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಅರ್ಪಿತಾ ಮುಖರ್ಜಿ ನಿವಾಸದ ಪಾರ್ಕಿಂಗ್ ಪ್ರದೇಶದಿಂದ ನಾಲ್ಕು ವಾಹನಗಳು ನಾಪತ್ತೆಯಾಗಿವೆ ಎನ್ನಲಾಗಿದೆ. ಜುಲೈ 22ರಂದು ಇ.ಡಿ ದಾಳಿ ನಡೆಸುವ ಮುನ್ನ ಇದ್ದ 2 ಮರ್ಸಿಡಿಸ್ ಬೆನ್ಜ್, ಒಂದು ಹೋಂಡಾ ಸಿಟಿ, ಒಂದು ಹೋಂಡಾ ಸಿಆರ್ವಿ ಹಾಗೂ ಆಡಿ ಎ4 ಪೈಕಿ ನಾಲ್ಕು ನಾಪತ್ತೆಯಾಗಿದೆ ಒಂದು ಮಾತ್ರ ಪತ್ತೆಯಾಗಿದೆ ಅಂತ ತಿಳಿದುಬಂದಿದೆ.
ನಾಪತ್ತೆಯಾಗಿರುವ ವಾಹನಗಳಲ್ಲಿ ನಗದು, ಚಿನ್ನ ಅಥವಾ ಇತರ ಬೆಲೆಬಾಳುವ ವಸ್ತುಗಳು ಇವೆ ಅಂತ ಅಧಿಕಾರಿಗಳು ಶಂಕಿಸಿದ್ದಾರೆ.
ಈ ಮಧ್ಯೆ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಜೋಕಾದಲ್ಲಿನ ಇಎಸ್‌ಐ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಹಾಜರುಪಡಿಸಲಾಗಿದೆ.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
ಭೀಕರ ದುರಂತ: ಲಾರಿ ಪಲ್ಟಿಯಾಗಿ ಮೂವರು PWD ಅಧಿಕಾರಿಗಳ ಸಾವು