December 26, 2024

Newsnap Kannada

The World at your finger tips!

aditi

ವಿವಾಹ ನಿಶ್ಚಿತಾರ್ಥ ​​ಮಾಡಿಕೊಂಡ ನಟಿ ಅದಿತಿ ಪ್ರಭುದೇವ

Spread the love

ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಸೀಕ್ರಿಟ್​ ಆಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ಅನುಮಾನ ಮೂಡಿದೆ, ಕಿರುತೆರೆ ಮೂಲಕ ಬಣ್ಣದ ಲೋಕದ ಪಯಣ ಆರಂಭಿಸಿರುವ ಅದಿತಿ ಈಗ ಹಿರಿತೆರೆಯಲ್ಲಿ ತಮ್ಮ ಛಾಪ ಅನ್ನು ಮೂಡಿಸಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಸದ್ಯ ಗುಟ್ಟಾಗಿ ಕುಟುಂಬಸ್ಥರ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಮಾತಿಗೆ ಸಾಕ್ಷಿ ಸ್ವತಃ ಅದಿತಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹುಡುನೊಬ್ಬನ ಜೊತೆಗಿರುವ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ, ಕಂಡ ಕನಸು ಕನಸಿನಂತೆ ನನಸಾದಾಗ ಎಂದು ನಟಿ ಅತಿದಿ ಬರೆದುಕೊಂಡಿರುವುದು ಅನುಮಾನಕ್ಕೆ ಪುಷ್ಠಿ ನೀಡಿದೆ,

https://www.instagram.com/p/CX-9AWhl9nh/?utm_medium=copy_link

ದಾವಣಗೆರೆ ಈ ಬೆಡಗಿ ಯಶಸ್​ ಎಂಬ ರೈತ ಯುವಕನನ್ನು ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರಂತೆ ಇವರು ಕೆಲ ದಿನಗಳ ಹಿಂದಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಫಿ ತೋಟದ ಮಾಲೀಕನಾದ ಯಶಸ್ ಚಿಕ್ಕಮಗಳೂರಿನ ಹುಡುಗ. ಇನ್ನು ರೈತನನ್ನೇ ಮದುವೆ ಆಗಬೇಕು ಅಂದುಕೊಂಡಿದ್ದ ಅದಿತಿ ಪ್ರಭುದೇವ ಕೂಡ ಅಂದುಕೊಂಡಂತೆ ರೈತನನ್ನೇ ಮದುವೆಯಾಗುತ್ತಿದ್ದಾರೆ. ಇಂದು ಅದೆಷ್ಟೋ ಹುಡುಗಿಯರು ಯುವಕ ರೈತ ಅಂದ್ರೆ ಮೂಗು ಮುರಿಯುತ್ತಾ ಬೆಂಗಳೂರಿನ ಗದ್ದಲದ ಜೀವನವನ್ನೇ ಬಯಸುತ್ತಿರುವಾಗ, ಒಬ್ಬ ಹೀರೋಯಿನ್ ಆದ್ರೂ ಇಂಥ ನಿರ್ಧಾರ ಕೈಗೊಂಡಿದ್ದಾರೆ ಅದಿತಿ.

Copyright © All rights reserved Newsnap | Newsever by AF themes.
error: Content is protected !!