February 24, 2026

Newsnap Kannada

The World at your finger tips!

Abhilasha

ಹಿಂದಿ ನಟಿ ಅಭಿಲಾಶಾ ಕೊರೋನಾಗೆ ಬಲಿ

Spread the love

ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿತ್ರ ಚಿಚೋರ್ ನಲ್ಲಿ ನಟಿಸಿದ್ದ ಅಭಿಲಾಶಾ ಪಾಟೀಲ್ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಬದ್ರಿನಾಥ್ ಕಿ ದುಲ್ಹಾನಿಯಾ, ಗುಡ್ ನ್ಯೂಸ್, ಮಲಾಲ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿಲಾಷಾ ನಟಿಸಿದ್ದರು.

ಅಭಿಲಾಶಾ ಪಾಟೀಲ್, ವಾರಣಾಸಿಯಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ಮುಂಬೈಗೆ ವಾಪಸ್ ಆದ ನಂತರ ಕೊರೊನಾ ಪಾಸಿಟಿವ್ ಬಂದಿದೆ.

ಆರಂಭಿಕ ರೋಗಲಕ್ಷಣ ಕಾಣಿಸಿಕೊಂಡ ನಂತ್ರ ಪರೀಕ್ಷೆ ಮಾಡಲಾಗಿತ್ತು. ಮನೆಯಲ್ಲಿಯೇ ನಟಿ ಚಿಕಿತ್ಸೆ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಉಂಟಾಗಿದೆ. ನಂತರ ಅವರನ್ನು ಐಸಿಯುಗೆ ದಾಖಲಿಸಲಾಯಿತು. ಮಂಗಳವಾ ಆರೋಗ್ಯ ಹದಗೆಟ್ಟಿತು. ‌ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಅಭಿಲಾಷಾ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಬದ್ರಿನಾಥ್ ಕಿ ದುಲ್ಹಾನಿಯಾ, ಗುಡ್ ನ್ಯೂಸ್, ಮಲಾಲ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿಲಾಷಾ ನಟಿಸಿದ್ದರು.

error: Content is protected !!