January 28, 2026

Newsnap Kannada

The World at your finger tips!

sonu

ನಟ ಸೋನು ಸೂದ್ ಮಾಡಿದ ಸಹಾಯ ಸುಳ್ಳೆ?

Spread the love

ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಅನೇಕ ಜನರಿಗೆ ಸಹಾಯ ಮಾಡಿದ್ದರು. ಎಷ್ಟೋ ಬಡವರಿಗೆ ಅವರ ಊರಿಗೆ ಹೋಗಲು ಬಸ್ – ವಿಮಾನದ ವ್ಯವಸ್ಥೆ, ಆಹಾರದ ವ್ಯವಸ್ಥೆ ಮುಂತಾದವುಗಳನ್ನೆಲ್ಲ ಮಾಡಿದ್ದರು. ಟ್ವಿಟರ್ ನಲ್ಲಿ‌ ತಮ್ಮ ಸಹಾಯ ಕೇಳಿ‌ ಟ್ವೀಟ್ ಮಾಡಿದವರಿಗೆ ಅವರ ಅವಶ್ಯಕತೆ ಅನುಗುಣವಾಗಿ ಸಹಾಯ ಮಾಡಿದ್ದರು. ಆದರೆ ಅವರು ಮಾಡಿದ್ದ ಸಹಾಯಗಳೆಲ್ಲ ಸುಳ್ಳಾ? ಎಂಬ ಅನುಮಾನಗಳು ಇದೀಗ ಮೂಡುತ್ತಿವೆ.

ಹೌದು, ಸೋನು ಸೂದ್ ಅವರಿಗೆ ಸಹಾಯ ಕೇಳಿ ಟ್ವೀಟ್ ಮಾಡಿದ್ದ ಖಾತೆಗಳಲ್ಲಿ, ಕೆಲವು ಖಾತೆಗಳು ಇದೀಗ ಅಳಿಸಿಹೋಗಿವೆ. ಇನ್ನು ಕೆಲವು ಟ್ವೀಟ್ ಗಳು ಕಾಣೆಯಾಗಿವೆ.‌ ಈ ಕ್ರಿಯೆಯಿಂದ‌ ನೆಟ್ಟಿಗರ ಮನದಲ್ಲಿ ಸಂಶಯದ ಬೀಜ ಹುಟ್ಟಿದೆ.

ಅನೇಕ ನೆಟ್ಟಿಗರು‌ ಸೋನು ಸೂದ್ ರಾಜಕೀಯ ಪ್ರವೇಶಕ್ಕೆ, ಜನರ ಸಿಂಪಥಿ ಗಳಿಸಿಕೊಳ್ಳಲು, ಪ್ರಚಾರ ಮಾಡಲು ಈ ರೀತಿ ಮಾಡಿದ್ದಾರೆ. ಅವರೇ ನಕಲಿ ಟ್ವೀಟ್ ಗಳನ್ನು ಮಾಡಿಸಿ, ಪ್ರತಿಕ್ರಿಯಿಸುವ ನಾಟಕ ಆಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಸೋನು ಸೂದ್ ಅವರ ಅಭಿಮಾನಿಗಳು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇವೆಲ್ಲ ಸುಳ್ಳು ಆರೋಪ ಎಂದು ಆಕ್ರೋಶಗೊಂಡಿದ್ದಾರೆ.

error: Content is protected !!