January 12, 2025

Newsnap Kannada

The World at your finger tips!

54fe9610 84c7 4e1a bac7 69f8323e7bb8

ನಟ ರಮೇಶ್ ಅರವಿಂದ್ – ಅಚ೯ನಾ ಪುತ್ರಿ ನಿಹಾರಿಕಾ – ಅಕ್ಷಯ್ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Spread the love

ನಟ/ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ – ಅಕ್ಷಯ್ ವಿವಾಹಮೋತ್ಸವವು ಇಂದು (ಡಿ.28) ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸರಳವಾಗಿ ನೆರವೇರಿತು.

ನಟ ರಮೇಶ್ ಅರವಿಂದ್-ಅರ್ಚನಾ ದಂಪತಿ ಪುತ್ರಿ ನಿಹಾರಿಕಾ – ಅಕ್ಷಯ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ಬೆಳಿಗ್ಗೆ 11ರಿಂದ 11.30ರ ಶುಭ ಲಗ್ನದಲ್ಲಿ ಈ ಜೋಡಿ ದಾಂಪತ್ಯಕ್ಕೆ ಹೆಜ್ಜೆ ಇಟ್ಟರು.

ಒಂದೇ ಕಂಪನಿಯಲ್ಲಿ ಕೆಲಸ:

ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕೆಲವೇ ಕೆಲವು ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ನೀಡಲಾಗಿತ್ತು.
ನಿಹಾರಿಕಾ-ಅಕ್ಷಯ್‌ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಅವರಿಬ್ಬರಿಗೂ ಪರಿಚಯವಾಗಿ, ಅದು ಮದುವೆ ಹಂತಕ್ಕೆ ಬಂದಿತ್ತು. ನಂತರ ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಇದೀಗ ಮದುವೆ ಕಾರ್ಯಕ್ರಮ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!