ಮಂಡ್ಯ : ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ ಕುಮಾರಸ್ವಾಮಿಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ಮಂಡ್ಯದ ಜನತೆ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ನಟ ಪ್ರಕಾಶ್ ರಾಜ್ ಮಂಡ್ಯದಲ್ಲಿ ಕರೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬ್ರಹ್ಮಾಸ್ತ್ರವಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆಯನ್ನು ರಾಜ್ಯ ಮಹಿಳಾ ಆಯೋಗ ಕೂಡ ಖಂಡಿಸಿದೆ. ಈ ವಿವಾದ ಭುಗಿಲೆದ್ದಿರುವಾಗಲೇ ಹೆಚ್‌ಡಿಕೆ ವಿರುದ್ಧ ನಟ ಕಂ ರಾಜಕಾರಣಿ ಪ್ರಕಾಶ್ ರಾಜ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೆಣ್ಣು ಮಗಳು ಒಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ನೀವು ಏನು ಹೇಳಿದ್ರಿ. ಮಾತು ಮನೆ ಕೆಡಿಸಿತ್ತು ಅನ್ನುವ ಹಾಗೆ ನಿಮ್ಮನ್ನು ಸೋಲಿಸಿ ಕಳುಹಿಸಿದರು.
ನನ್ನ ಸ್ವಾಭಿಮಾನಕ್ಕಾಗಿ ಸೆರಗೊಡ್ಡಿ ಮತ ಕೇಳಿದರು .ಈಗ ಮಗನನ್ನು ಸೋಲಿಸಿದವರ ಮನೆ ಮುಂದೆ ಹೋಗಿ ನಿಂತುಕೊಂಡಿದ್ದಾರೆ. ಚುನಾವಣೆಯಲ್ಲಿ ನನ್ನ ಗೆಲ್ಲಿಸಲು ನನ್ನ ಜೊತೆ ಬನ್ನಿ ಅಂತಿದ್ದಾರೆ.
ನಮ್ಮ ಸ್ವಾಭಿಮಾನ, ನಮ್ಮ ಹಕ್ಕು ಮುಖ್ಯ. ಮಂಡ್ಯದ ಜನತೆ ಇವರಿಗೆ ಸರಿಯಾದ ಪಾಠ ಕಲಿಸಬೇಕು ಎಂದಿದ್ದಾರೆ.
ದಾರಿ ತಪ್ಪಿದ ಮಗ ಯಾರು? ದಾರಿ ತಪ್ಪಿದ ಕಳ್ ನನ್ಮಗ ಯಾರು ಅಂತ ಏಪ್ರಿಲ್ 26 ರಂದು ನಿಮ್ಮ ವೋಟಿನ ಮೂಲಕ ಹೇಳಬೇಕು. ಇದು ನಮ್ಮ ಜವಾಬ್ದಾರಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
More Stories
ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ