ನ್ಯೂಸ್ ಸ್ನ್ಯಾಪ್
ಮುಂಬೈ,
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಬಂಗಲೆಯ ಸ್ವಲ್ಪ ಭಾಗವನ್ನು ಅನಧಿಕೃತವಾಗಿ ನಿರ್ಮಿಸಿರುವ ಕಾರಣಕ್ಕಾಗಿ ಎಂದು ಹೇಳಿ ತೆರವು ಮಾಡಲು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿ ಎಮ್ ಸಿ) ನ ಅಧಿಕಾರಿಗಳು ಮುಂದಾಗಿರುವ ಘಟನೆ ಇಂದು ನಡೆದಿದೆ.
ನಡೆದಿದ್ದು ಏನು?
ಬಂಗಲೆಯ ಅನಧಿಕೃತ ಭಾಗವನ್ನು ತೆರವು ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿ.ಎಮ್.ಸಿ. ಯ ಕಾರ್ಯನಿರ್ವಾಹಕ ಇಂಜಿನಿಯರ್” ಕಂಗನಾ ಅವರ ಬಂಗಲೆಯ ಅನಧಿಕೃತ ಭಾಗದ ಬಗ್ಗೆ ವಿವರಣೆ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಲು ಕೋರಿದ್ದೆವು. ಆದರೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಅವರಿಗೆ ನಾವು ಇನ್ನು 24 ಗಂಟೆಗಳಲ್ಲಿ ಅನಧಿಕೃತ ಕೆಲಸಗಳನ್ನು ನಿಲ್ಲಿಸಬೇಕೆಂದು ನೋಟಿಸ್ ಸಹ ನೀಡಿದ್ದೆವು. ಆದರೆ ಕಂಗನಾ ಅವರಾಗಲಿ, ಬಂಗಲೆಯ ಇತರೆ ಸಿಬ್ಬಂದಿಗಳಾಗಲೀ ಸರಿಯಾಗಿ ಸ್ಪಂದಿಸದೇ ಇದ್ದುದರಿಂದ ನಾವು ನೋಟಿಸ್ ನ ಪ್ರತಿಯನ್ನು ಅವರ ಬಂಗಲೆಯ ಗೇಟ್ ಗೆ ಅಂಟಿಸಿದೆವು” ಎಂದು ಹೇಳಿದರು.
ಬಿ. ಎಮ್. ಸಿ. ಯವರ ನಡೆಯನ್ನು ಖಂಡಿಸಿರುವ ಕಂಗನಾ ” ಶಿವಸೇನೆಯ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರ ಸರ್ಕಾರ ತಮ್ಮನ್ನು ಈ ರೀತಿ ಗುರಿಯಾಗಿಸಿದೆ” ಎಂದು ದೂರಿದ್ದಾರೆ. ಈ ಮೊದಲು “ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ. ಇಲ್ಲಿರಲು ಭಯವಾಗುತ್ತದೆ. ಮುಂಬೈ ಪೋಲಿಸರ ಮೇಲೆ ನಂಬಿಕೆಯಿಲ್ಲ’ ಎಂಬ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ನಂತರ ಅವರಿಗೆ ಜೀವ ಬೆದರಿಕೆ ಬಂದಿದ್ದರಿಂದ ಕೇಂದ್ರ ಗೃಹ ಇಲಾಖೆಯು ಅವರಿಗೆ ವೈ + ಭದ್ರತೆನ್ನೂ ನೀಡಿತ್ತು.
ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಂಗನಾ ಪಾಕಿಸ್ತಾನ್’ ಎಂದು ಸಂಬೋಧಿಸಿರುವದರ ಜೊತೆಗೆ ‘ನಾನೇನು ತಪ್ಪು ಮಾಡಿಲ್ಲ. ಈ ರೀತಿ ವರ್ತಿಸಿ ನನ್ನ ಶತ್ರುಗಳು ಏಕೆ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಪದೇ ಪದೇ ಸಾಬೀತುಮಾಡುತ್ತಿದ್ದಾರೆ’ ಎಂದು ಪೋಸ್ಟ್ ಮಾಡಿದ್ದಾರೆ. ಮುಂಬಯಿಯ ಮುನ್ಸಿಪಾಲ್ ಸಿಬ್ಬಂದಿಗಳ ಚಿತ್ರವೊಂದನ್ನ ಹಾಕಿ ಅದಕ್ಕೆ ‘ಬಾಬರ್ ಮತ್ತು ಅವನ ಸೇನೆ’ ಎಂದೂ ಹೆಸರಿಸಿದ್ದಾರೆ. ಟ್ವಿಟರ್ ನ ಪೋಸ್ಟ್ ಗೆ ಹ್ಯಾಶ್ ಟ್ಯಾಗ್ ಬಳಸಿ #Death of democracy ಎಂದು ನಮೂದಿಸಿದ್ದಾರೆ.
ಈ ಪ್ರಕರಣ ಕುರಿತಂತೆ ಇಂದು ಬೆಳಿಗ್ಗೆ ಕಂಗನಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಹೈಕೋರ್ಟ್ ಇಂದು ಮಧ್ಯಾಹ್ನ ಬಂಗಲೆಯ ಅನಧಿಕೃತ ಭಾಗವನ್ನು ತೆರವುಗೊಳಿಸುವುದಕ್ಕೆ ತಡೆಯಾಜ್ಞೆ ನೀಡಿದೆ.
More Stories
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ