ಸ್ಯಾಂಡಲ್ ವುಡ್ ನಲ್ಲಿ ವಿವಾದವನ್ನೆಬ್ಬಿಸಿರುವ ಡ್ರಗ್ಸ್ ಪ್ರಕರಣ ದಿನೇ ದಿನೇ ಕಕುತೂಹಲ ರೂಪವನ್ನು ತಾಳುತ್ತಿದೆ. ಇದೀಗ ಚಂದನವನದ ತಾರಾ ದಂಪತಿಗಳಾದ ನಟ ದಿಗಂತ್ ಹಾಗೂ ನಟಿ ಐಂದ್ರತಾ ರೇ ಅವರನ್ನು ಡ್ರಗ್ಸ್ ಪ್ರಕರಣ ತನ್ನ ತೆಕ್ಕೆಗೆ ಎಳೆದುಕೊಂಡಿದೆ.
ಮಾದಕವಸ್ತು ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ತಮ್ಮ ಹೇಳಿಕೆಯಲ್ಲಿ ನಟಿ ಐಂದ್ರಿತಾ ರೇ ಅವರನ್ನೂ ಹೆಸರಿಸಿದ್ದರು. ಆರೋಪಿ ವಿರೇನ್ ಖನ್ನಾ ಕೂಡ ಐಂದ್ರಿತಾ ರೇ ಅವರ ಹೆಅರನ್ನು ಹೇಳಿದ್ದ.
ಈ ಹಿನ್ನಲೆಯಲ್ಲಿ ಸಿಸಿಬಿ ದಿಗಂತ್ ಹಾಗೂ ಐಂದ್ರಿತಾ ಅವರಿಗೆ ವಿಚಾರಣೆಗೋಸ್ಕರ ನೋಟೀಸ್ ನೀಡಿತ್ತು. ಇಂದು ಬೆಳಿಗ್ಗೆ ೧೧ ಗಂಟೆಗೆ ಇಬ್ಬರೂ ಸಿಸಿಬಿ ಕಛೇರಿಗೆ ಹಾಜರಾಗಿದ್ದಾರೆ. ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )