ಆನೆ ಮೇಲೆ ನಿಂತು ಫೋಸ್- ನಟ ಧನ್ವೀರ್ ವಿರುದ್ಧ ಎಫ್ಐಆರ್

Team Newsnap
1 Min Read

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವೇಳೆ ಸಫಾರಿ ನಡೆಸಿದ್ದ ಆರೋಪದ ಮೇಲೆ ನಟ ಧನ್ವೀರ್‌ ಗೌಡ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಆದರೆ ಇದು ಸಫಾರಿ ಮಾಡಿದ್ದಕ್ಕಲ್ಲ, ಬದಲಿಗೆ ಆನೆಯ ಮೇಲೆ ನಿಂತು ಫೋಸ್‌ ಕೊಟ್ಟಿದ್ದ ಕಾರಣಕ್ಕಾಗಿ!

‘ಬಜಾರ್’ ಚಿತ್ರದ ನಾಯಕ ನಟ ಧನ್ವೀರ್‌ ಗೌಡ ಈ ಹಿಂದೆ ಆನೆಯ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿದ್ದಕ್ಕಾಗಿ ‘ನಾಗರಹೊಳೆ ರಾಷ್ಟ್ರೀಯ ಉದ್ಯಾನವನ’ದ ನಿರ್ದೇಶಕರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಿಸ ಲಾಗಿದೆ.
ಇನ್ನು ಎಫ್‌ಐಆರ್‌ನಲ್ಲಿ ಧನ್ವೀರ್ ಸೇರಿದಂತೆ 6 ಮಂದಿ ಹೆಸರನ್ನು ಸಹ ಸೇರಿಸಲಾಗಿದೆ. ಅರಣ್ಯ ಇಲಾಖೆಯ ದೂರಿನನ್ವಯ ಧನ್ವೀರ್‌ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಅವರೊಟ್ಟಿಗಿದ್ದ 5 ಮಂದಿ ಸೇಹ್ನಿತರಿಗೂ ಇದೀಗ ಸಂಕಷ್ಟ ಎದುರಾದಂತಿದೆ.

ಸೆ.27ರಂದು ಮತ್ತಿಗೂಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ಧನ್ವೀರ್ ಅವರೊಟ್ಟಿಗಿನ ಸ್ನೇಹಿತರು ಅಲ್ಲಿನ ಆನೆಗಳನ್ನ ಕಂಡು ಅವುಗಳ ಮೇಲೆ ಏರಿ ಕುಳಿತು ಪೋಟೋ, ವಿಡಿಯೋಗೆ ಪೋಸ್ ಕೊಟ್ಟಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಧನ್ವೀರ್‌ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಎಫ್‌ಐಆರ್‌ ದಾಖಲು ಮಾಡಿದೆ. ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ದೂರು ಇದಾಗಿದ. ಧನ್ವೀರ್‌, ವಿಶ್ವಾಸ್‌ ಅಯ್ಯರ್‌, ದರ್ಶನ್‌ ಬಿನ್‌ ನಂದಕುಮಾರ್ ಹಾಗೂ ಈ ಜೊತೆಗೆ ಹೆಸರು ಪತ್ತೆಯಾಗದ ಇನ್ನೂ ಮೂವರು ಆರೋಪಿಗಳ ಮೇಲೆ ಕೇಸ್‌ ದಾಖಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರಾದ‌ ಮಹೇಶ್ ಅವರು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗದ ತಾರೆಯರು ಎಂದು ಹೇಳಿಕೊಂಡು ಆನೆ ಚೌಕೂರು ವನ್ಯಜೀವಿ ವಲಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


Share This Article
Leave a comment