ದಕ್ಷಿಣ ಭಾರತದ ಚಿತ್ರರಂಗ ಸೂಪರ್ ಸ್ಟಾರ್ ಗಳ ಕುಟುಂಬಗಳಲ್ಲಿ ಭೀಕರ ಬಿರುಗಾಳಿ ಬೀಸುತ್ತಿದೆ
ನಿನ್ನೆಯಷ್ಟೇ ಕಾಲಿವುಡ್ ಸೂಪರ್ಸ್ಟಾರ್ ರಜನಿ ಕಾಂತ್ ಪುತ್ರಿ ಐಶ್ವರ್ಯ ಹಾಗೂ ನಟ ಧನುಷ್ ತಮ್ಮ ಸಂಸಾರಿಕ ಬದುಕಿಗೆ ದಿಢೀರ್ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ
ಈಗ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರ ಹೆಸರಿನ ಮುಂದಿದ್ದ ತಮ್ಮ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ.
ಈ ಹಿಂದೆ ಶ್ರೀಜಾ ಕಲ್ಯಾಣ್ ಎಂದಿದ್ದ ತಮ್ಮ ಹೆಸರನ್ನು ಶ್ರೀಜಾ ಕೊನಿಡೇಲ ಅಂತ ಬದಲಾಯಿಸಿಕೊಂಡಿದ್ದಾರೆ.
ಶ್ರೀಜಾ ಹಾಗೂ ನಟ ಕಲ್ಯಾಣ್ ದೇವ್ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿದ್ದು ಇಬ್ಬರೂ ಶ್ರೀಘದಲ್ಲಿಯೇ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಶ್ರೀಜಾ ಹಾಗೂ ಕಲ್ಯಾಣ್ ದೇವ್ 2016 ಮಾರ್ಚ್ 28 ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಈ ದಂಪತಿಗೆ ನಾವಿಷ್ಕಾ ಎಂಬ ಹೆಣ್ಣು ಮಗುವಿದೆ.
ಕಲ್ಯಾಣ್ ದೇವ್ ಅವರನ್ನು ವಿವಾಹವಾಗುವ ಮುನ್ನ ಶ್ರೀಜಾ 2007 ರಲ್ಲಿ ಸಿರಿಶ್ ಭಾರದ್ವಾಜ್ ಎಂಬುವವರನ್ನು ಮದುವೆಯಾಗಿದ್ದರು. 2009 ರಲ್ಲಿ ಈ ದಂಪತಿಗೆ ನಿವೃತಿ ಎಂಬ ಹೆಣ್ಣು ಮಗು ಹುಟ್ಟಿತ್ತು. ಆದರೆ 2011ರಲ್ಲಿ ಶ್ರೀಜಾ, ಭಾರಧ್ವಾಜ್ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿ ಡಿವೋರ್ಸ್ ಪಡೆದು ತಮ್ಮ ಬಾಲ್ಯದ ಗೆಳೆಯ ಕಲ್ಯಾಣ್ ದೇವ್ ಅವರನ್ನು ವಿವಾಹವಾಗಿದ್ದಾರೆ. ಈಗ ಎರಡನೇ ಗಂಡನಿಗೂ ವಿಚ್ಚೇದನ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆಂದು ಹೇಳಲಾಗಿದೆ
ಈ ಸುದ್ದಿ ನಿಜವಾದರೆ ಮೆಗಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಮತ್ತೆ ಅಘಾತ ಎದುರಾಗಲಿದೆ.
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ