December 27, 2024

Newsnap Kannada

The World at your finger tips!

WhatsApp Image 2022 01 18 at 1.00.51 PM

ನಟ ಚಿರಂಜೀವಿ ಪುತ್ರಿ ಶ್ರೀಜಾ ಎರಡನೇ ಗಂಡನಿಗೂ ಗುಡ್ ಬೈ ಹೇಳುತ್ತಾರಾ ?

Spread the love

ದಕ್ಷಿಣ ಭಾರತದ ಚಿತ್ರರಂಗ ಸೂಪರ್ ಸ್ಟಾರ್ ಗಳ ಕುಟುಂಬಗಳಲ್ಲಿ ಭೀಕರ ಬಿರುಗಾಳಿ ಬೀಸುತ್ತಿದೆ

ನಿನ್ನೆಯಷ್ಟೇ ಕಾಲಿವುಡ್​ ಸೂಪರ್​ಸ್ಟಾರ್​ ರಜನಿ ಕಾಂತ್​ ಪುತ್ರಿ ಐಶ್ವರ್ಯ ಹಾಗೂ ನಟ ಧನುಷ್ ತಮ್ಮ ಸಂಸಾರಿಕ ಬದುಕಿಗೆ ದಿಢೀರ್​ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ

ಈಗ ತೆಲುಗಿನ ಮೆಗಾ ಸ್ಟಾರ್​ ಚಿರಂಜೀವಿ ಪುತ್ರಿ ಶ್ರೀಜಾ ಕೂಡ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಅವರ ಹೆಸರಿನ ಮುಂದಿದ್ದ ತಮ್ಮ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ.

ಈ ಹಿಂದೆ ಶ್ರೀಜಾ ಕಲ್ಯಾಣ್​ ಎಂದಿದ್ದ ತಮ್ಮ ಹೆಸರನ್ನು ಶ್ರೀಜಾ ಕೊನಿಡೇಲ ಅಂತ ಬದಲಾಯಿಸಿಕೊಂಡಿದ್ದಾರೆ.

ಶ್ರೀಜಾ ಹಾಗೂ ನಟ ಕಲ್ಯಾಣ್​ ದೇವ್​ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿದ್ದು ಇಬ್ಬರೂ ಶ್ರೀಘದಲ್ಲಿಯೇ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ.

ಶ್ರೀಜಾ ಹಾಗೂ ಕಲ್ಯಾಣ್​ ದೇವ್​ 2016 ಮಾರ್ಚ್​ 28 ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಈ ದಂಪತಿಗೆ ನಾವಿಷ್ಕಾ ಎಂಬ ಹೆಣ್ಣು ಮಗುವಿದೆ.

ಕಲ್ಯಾಣ್​ ದೇವ್​ ಅವರನ್ನು ವಿವಾಹವಾಗುವ ಮುನ್ನ ಶ್ರೀಜಾ 2007 ರಲ್ಲಿ ಸಿರಿಶ್ ಭಾರದ್ವಾಜ್ ಎಂಬುವವರನ್ನು ಮದುವೆಯಾಗಿದ್ದರು. 2009 ರಲ್ಲಿ ಈ ದಂಪತಿಗೆ ನಿವೃತಿ ಎಂಬ ಹೆಣ್ಣು ಮಗು ಹುಟ್ಟಿತ್ತು. ಆದರೆ 2011ರಲ್ಲಿ ಶ್ರೀಜಾ, ಭಾರಧ್ವಾಜ್ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿ ಡಿವೋರ್ಸ್​ ಪಡೆದು ತಮ್ಮ ಬಾಲ್ಯದ ಗೆಳೆಯ ಕಲ್ಯಾಣ್​ ದೇವ್​ ಅವರನ್ನು ವಿವಾಹವಾಗಿದ್ದಾರೆ. ಈಗ ಎರಡನೇ ಗಂಡನಿಗೂ ವಿಚ್ಚೇದನ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆಂದು ಹೇಳಲಾಗಿದೆ
ಈ ಸುದ್ದಿ ನಿಜವಾದರೆ ಮೆಗಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಮತ್ತೆ ಅಘಾತ ಎದುರಾಗಲಿದೆ.

Copyright © All rights reserved Newsnap | Newsever by AF themes.
error: Content is protected !!