January 29, 2026

Newsnap Kannada

The World at your finger tips!

actor chetana

ಫ್ಯಾಟ್ ಸರ್ಜರಿ ವೇಳೆ ಕಿರುನಟಿ ಚೇತನಾ ರಾಜ್ ಸಾವು

Spread the love

ಗೀತಾ, ದೊರೆಸಾನಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿರುವ ಕಿರುತೆರೆ ನಟಿ ಚೇತನಾರಾಜ್ ಪ್ಯಾಟ್ ಸರ್ಜರಿ ವಿಫಲವಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ.

ಶೆಟ್ಟಿ ಕಾಸ್ಮಿಟಿಕ್ ಆಸ್ಪತ್ರೆಯಲ್ಲಿ ಚೇತನಾಗೆ ಪ್ಯಾಟ್ ಸರ್ಜರಿ ನಡೆಯುತ್ತಿತ್ತು. ಈ ವೇಳೆ ಶ್ವಾಸಕೋಶಕ್ಕೆ ನೀರಿನ ಆಂಶ ಸೇರಿಕೊಂಡು ಆಕೆ ಕೊನೆಯುಸಿರೆಳೆದಳು.

ನವರಂಗ್ ನ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ತಿದ್ದ ಚೇತನಾ ರಾಜ್, ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಅವರ ಆರೋಗ್ಯ ಗಂಭೀರವಾದ ಪರಿಣಾಮ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ : ಜ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ- CRPFನಿಂದ ರಕ್ಷಣೆಗೆ ಕೋರ್ಟ್​ ಆದೇಶ

ಕಲರ್ಸ್ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ದಾರಾವಾಹಿಗಳಲ್ಲಿ ಚೇತನಾ ರಾಜ್‌ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟಿಸಿದ್ದಾರೆ. ಅವರಿಗೆ ಕಲರ್ಸ್ ಕನ್ನಡದ ʻಒಲವಿನ ನಿಲ್ದಾಣʼ ಅನ್ನೋ ಹೊಸ ಧಾರವಾಹಿಯಲ್ಲಿ ಮುಖ್ಯ ಪಾತ್ರ ಸಿಕ್ಕಿತ್ತು.

WhatsApp Image 2022 05 17 at 7.44.40 AM

ಪೋಷಕರ ಅನುಮತಿ ಇಲ್ಲದೇ ಫ್ಯಾಟ್ ಸರ್ಜರಿ ಆಪರೇಷನ್ ಮಾಡಿದ್ದೇ ತಪ್ಪು. ಅಲ್ಲದೇ ವೈದ್ಯರ ನಿರ್ಲಕ್ಷ್ಯದಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ತಾಯಿ ಮುನಿಲಕ್ಷ್ಮಿ ದೂರಿದ್ದಾರೆ. ಬೆಂಗಳೂರಿನ ಸುಬ್ರಮಣ್ಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!