ನಟನಾಗಿ ಯಶಸ್ಸು ಕಂಡ ನಂತರ, ತಮ್ಮ ವೈಯಕ್ತಿಕ ಆಸೆ ಮತ್ತು ಕನಸುಗಳನ್ನು ಪೂರೈಸುವ ಸಲುವಾಗಿ ಇತರ ಕ್ಷೇತ್ರಗಳಲ್ಲಿ ಶ್ರಮಿಸುವುದು ಅಪರೂಪ. ಈ ದಾರಿಯಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅನುಕರಣೀಯ ಉದಾಹರಣೆಯಾಗಿದ್ದು, ದುಬೈ 24H ಕಾರ್ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಅಭಿಮಾನಿಗಳಿಗೆ ಹೊಸ ಪ್ರೇರಣೆ ನೀಡಿದ್ದಾರೆ.
15 ವರ್ಷಗಳ ನಂತರ ರೇಸ್ ಟ್ರಾಕ್‌ಗೆ ಮರಳಿ ಬಂದ ಅಜಿತ್
ಅಜಿತ್ ಕುಮಾರ್ ಮೂಲತಃ ಕಾರು ಹಾಗೂ ಬೈಕ್ ರೇಸ್‌ಗಳ ಮೇಲಿನ ಅತೀವ ಆಸಕ್ತಿಯಿಂದಲೇ ಹಳೆಯ ಕಾಲದಲ್ಲೇ ರೇಸರ್ ಆಗಿ ಮಿಂಚಿದ್ದರು. ಆದರೆ 2010ರ ನಂತರ ನಟನೆಯಲ್ಲೇ ತಮ್ಮ ಗಮನ ಹರಿಸಿಕೊಂಡ ಅವರು, ಇದೀಗ 15 ವರ್ಷಗಳ ನಂತರ ತಮ್ಮ ಕನಸನ್ನು ನಿಜಗೊಳಿಸಲು ಮತ್ತೊಮ್ಮೆ ರೇಸ್ ಟ್ರಾಕ್‌ಗೆ ಮರಳಿದರು.
ದುಬೈ 24H ಕಾರ್ ರೇಸ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ ಅಜಿತ್, ಬಲಿಷ್ಠ ತಂಡವನ್ನು ರಚಿಸಿ, ತಾವು ವೈಯಕ್ತಿಕವಾಗಿ ಫಿಟ್ ಆಗಲು ತೂಕ ಇಳಿಸಿ, ಅವಿರತ ತರಬೇತಿ ಪಡೆದಿದ್ದರು.ಇದನ್ನು ಓದಿ –ಮಿಸೆಸ್ ಇಂಡಿಯಾ ಕಿರೀಟ ಗೆದ್ದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ
ಕಠಿಣ ತರಬೇತಿ ಮತ್ತು ಅಪಘಾತದ ಹೊರತಾದ ಸಾಧನೆ
ತೀವ್ರ ತರಬೇತಿಯ ಸಮಯದಲ್ಲಿ ಅಜಿತ್ ಭೀಕರ ಅಪಘಾತಕ್ಕೊಳಗಾದರೂ, ನೋವಿನ ನಡುವೆಯೂ ಹಿಂತಿರುಗದೇ ತಮ್ಮ ತಂಡದೊಂದಿಗೆ ಸ್ಪರ್ಧೆಗೆ ಸಿದ್ಧರಾಗಿದರು. ದುಬೈ 24H ಕಾರ್ ರೇಸ್‌ನ 911 ಜಿಟಿ3R ವಿಭಾಗದಲ್ಲಿ ಅಜಿತ್ ಅವರ ತಂಡವು ನಿರಂತರ 24 ಗಂಟೆಗಳ ಕಾಲ ಕಾರನ್ನು ಓಡಿಸುವ ಸವಾಲನ್ನು ಎದುರಿಸಿತು. ತಂಡವು 568 ಸುತ್ತುಗಳನ್ನು ಪೂರ್ಣಗೊಳಿಸಿ 26 ಬಾರಿ ಕಾರು ನಿಲ್ಲಿಸುವ ಮೂಲಕ ಮೂರನೇ ಸ್ಥಾನವನ್ನು ಗಳಿಸಿತು.
More Stories
ಹಣ ಡಬ್ಲಿಂಗ್ ಹೆಸರಲ್ಲಿ 2 ಕೋಟಿ ರೂಪಾಯಿ ವಂಚನೆ: 7 ಮಂದಿ ಬಂಧನ
ಹಸುಗಳ ಕೆಚ್ಚಲು ಕೊಯ್ದಆರೋಪಿ ಬಂಧನ : ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ
ಮಿಸೆಸ್ ಇಂಡಿಯಾ ಕಿರೀಟ ಗೆದ್ದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ