January 15, 2025

Newsnap Kannada

The World at your finger tips!

letter

ಶಾಸಕರನ್ನು ನೋಡಲು ಬಸ್ ನಿಂದ ನೆಗೆದ ಕಾರ್ಯಕರ್ತ : ಮುರಿದ ಹಲ್ಲುಗಳನ್ನು ಕಟ್ಟಿಸಿಕೊಡಿ – ಶಾಸಕರಿಗೆ ಪತ್ರ

Spread the love

ನಿಮ್ಮನ್ನು ನೋಡುವ ಆತುರದಲ್ಲಿ ಬಸ್ ನಿಂದ ನೆಗೆದು ಬಿದ್ದು ಹಲ್ಲು ಮುರಿದು ಕೊಂಡಿದ್ದೇನೆ. ನನಗೆ ನಮ್ಮ ಖರ್ಚಿನಲ್ಲಿ ಹಲ್ಲು ಕಟ್ಟಿಸಿಕೊಡಿ ಎಂದು
ಚನ್ನರಾಯಪಟ್ಟಣ ತಾಲೂಕಿನ ಕೊತ್ತನಘಟ್ಟ ಜೆಡಿಎಸ್ ಕಾರ್ಯಕರ್ತನೊಬ್ಬ ಶಾಸಕರಿಗೆ ಪತ್ರ ಬರೆದಿದ್ದಾರೆ.

letter 1

ಚನ್ನರಾಯಪಟ್ಟಣ ಜೆಡಿಎಸ್​ ಶಾಸಕ ಸಿ.ಎನ್​ ಬಾಲಕೃಷ್ಣರಿಗೆ ಅಣ್ಣಪ್ಪ ಎಂಬುವವರು ಶಾಸಕರಿಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ನಾನು ಜೆಡಿಎಸ್​​ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನನ್ನ ಪಕ್ಷಕ್ಕಾಗಿ ನಾನು ಪ್ರಾಣವನ್ನೂ ಕೊಡಲೂ ಸಿದ್ಧನಿದ್ದೇನೆ. ಶಾಸಕರೇ ಕೆಲ ವರ್ಷಗಳ ಹಿಂದೆ ನಾನು ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನೀವು ನಿಂತಿದ್ದಿರಿ. ನಿಮ್ಮನ್ನು ನೋಡುವ ಆತುರದಲ್ಲಿ ನಾನು ಚಲಿಸುತ್ತಿದ್ದ ಬಸ್​ನಿಂದ ನೆಗೆದಿದ್ದೆ, ಇದು ನಿಮಗೆ ಗೊತ್ತಿರುವ ವಿಚಾರ. ಆ ವೇಳೆ ನನ್ನ ಹಲ್ಲುಗಳನ್ನು ಕಳೆದುಕೊಂಡಿದ್ದೆ. ಆದ್ದರಿಂದ ತಾವು ದಯಮಾಡಿ ನನಗೆ ಹಲ್ಲು ಕಟ್ಟಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!