December 23, 2024

Newsnap Kannada

The World at your finger tips!

kalarbugi , News , Drought

ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ: ಎನ್ ಚಲುವರಾಯಸ್ವಾಮಿ

Spread the love

ಮಂಡ್ಯ : ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದೆ, ರೈತರಿಗೆ ಉತ್ತಮ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಿಗಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ವರ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ ಮಂಗಳವಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ‌ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು‌.

ಬೆಳೆ ವಿಮೆ ಕುರಿತಂತೆ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಹೆಚ್ಚು ಜನರು ನೊಂದಾಯಿಸಿಕೊಳ್ಳಬೇಕು ಎಂದರು.

ರಾಸುಗಳಲ್ಲಿ ಕಂಡು ಬರುವ ಚರ್ಮಗಂಟು ರೋಗ ತಡೆಗಟ್ಟಲು ಹಾಗೂ ಕಿಶಾನ್ ಕ್ರೆಡಿಟ್‌ ಕಾಡ್೯ಗಳ ವಿತರಣೆ ಮಾಡುವಂತೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

WhatsApp Image 2023 06 27 at 6.17.48 PM
Action if poor quality fertilizer is sold: N Cheluvarayaswamy ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ: ಎನ್ ಚಲುವರಾಯಸ್ವಾಮಿ

ಮೀನು ಮರಿ ಸಾಕಾಣಿಕೆಗೆ ಸಂಬಂಧಿಸಿದಂತೆ ದೊಡ್ಡ ಕೆರೆಗಳಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ಪಂಚಾಯತ್ ಹಂತದಲ್ಲಿ ಬರುವ ಸಣ್ಣ ಕೆರೆ, ಕೃಷಿ ಹೊಂಡಗಳಲ್ಲಿ ಮೀನು ಮರಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಿದರೆ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.

ಮಿಮ್ಸ್ ಆಸ್ಪತ್ರೆ ಗೆ 450 ಬೆಡ್ ಗೆ ಅನುಮೋದನೆ ಪಡೆದಿದೆ, 850 ಬೆಡ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ‌ ನೀಡಲಾಗುತ್ತಿದೆ. 2000 ಜನ ಪ್ರತಿದಿನ ಔಟ್ ಪೇಷೆಂಟ್ ಗಳಿದ್ದಾರೆ, ಇಲ್ಲಿ ಹೆಚ್ಚಿನ ವೈದ್ಯರು ಹಾಗೂ ಸಿಬ್ಬಂದಿಗಳ ಅವಶ್ಯಕತೆ ಇದ್ದು, ಇದನ್ನು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದರು.

WhatsApp Image 2023 06 27 at 6.17.48 PM 1

ಮಿಮ್ಸ್ ಆಸ್ಪತ್ರೆಯ ಹತ್ತಿರ ಇರುವ ಸ್ಲಾಂ ನ್ನು ಸ್ಥಳಾಂತರ ಮಾಡಿದರೆ ಆಸ್ಪತ್ರೆಯನ್ನು ವಿಸ್ತರಿಸಲು ಹಾಗೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು‌.

ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಉಪಕರಣಗಳು, ಥೆರಪಿಸ್ಟ್ ಗಳ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನಲ್ಲಿ ಹೆಚ್ಚಿನ ಜನರು ರೇಷ್ಮೆ ಬೆಳೆಗಾರರಿದ್ದಾರೆ, ಈ ಭಾಗದಲ್ಲಿ ರೇಷ್ಮೆ ವಿಸ್ತೀರ್ಣ ಕೇಂದ್ರಗಳನ್ನು ಮುಚ್ಚಲಾಗಿದೆ. ರೇಷ್ಮೆ ವಿಸ್ತೀರ್ಣ ಕೇಂದ್ರಗಳನ್ನು ತೆರೆಯುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಮಳವಳ್ಳಿ ತಾಲ್ಲೂಕು ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಲ್ಲ, ಇರುವ ವೈದ್ಯಕೀಯ ಉಪಕರಣಗಳು ಸರಿಯಾಗಿ ಉಪಯೋಗವಾಗುತ್ತಿಲ್ಲ. ಇವುಗಳ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿ.ಎಸ್.ಆರ್ ಅನುದಾನವನ್ನು ಬಳಸಿಕೊಳ್ಳಬಹುದು. ಆದರಿಂದ ಕಾರ್ಖಾನೆಗಳಿಂದ ನೀಡಬೇಕಿರುವ ಸಿ.ಎಸ್.ಆರ್ ಅನುದಾನವನ್ನು ಸಭೆ ನಡೆಸಿ ಕ್ರೋಡೀಕರಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ಆಯುಷ್ನಾನ್ ಕಾಡ್೯ ನೊಂದಣಿ ಕುರಿತಂತೆ ಕಾಡ್೯ ನೊಂದಣಿ ಗ್ರಾಮ ಒನ್ ಸೆಂಟರ್ ನಲ್ಲಿ ಮಾಡಲಾಗುತ್ತಿದೆ. ಇದನ್ಬು ಹೆಚ್ಚಿಸಲು ಶಿಬಿರಗಳನ್ನು ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ 45000 ಮೀನುಗಾರರಿದ್ದು, ಎರಡು ಎಫ್.ಪಿ.ಓ ಗಳು ಮಾತ್ರ ಇದೆ. ಎಫ್.ಪಿ.ಓ ಗಳ ರಚನೆಗೆ ನಿಗದಿತ ಗುರಿ ಇಲ್ಲ. 100 ರಿಂದ 150 ಮೀನುಗಾರರನ್ನು ಸೇರಿಸಿ ಚಟುವಟಿಕೆ ನಡೆಸಲು ಹೆಚ್ಚಿನ ಎಫ್.ಪಿ.ಓ ರಚಿಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ಬೆಂಗಳೂರು ಪ್ರಪಂಚದ ದೃಷ್ಠಿಗೆ ಬೀಳುವಂತೆ ಮಾಡಿದ ಕೀರ್ತಿ ಕೆಂಪೇಗೌಡರದ್ದು: ಚಲುವರಾಯಸ್ವಾಮಿ

ಸಭೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ ಪುಟ್ಟಣ್ಣಯ್ಯ, ಪಿ.ರವಿಕುಮಾರ್, ಉದಯ್, ಮಂಜು, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಎಚ್.ಎಲ್ ನಾಗರಾಜ್ ಅವರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!