ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ನಡೆದಿದೆ, ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದಾನೆ ಈ ಘಟನೆ ಸಾರಕ್ಕಿ ಸಿಗ್ನಲ್ ಬಳಿ ನಡೆದಿದೆ.
ಇದನ್ನು ಓದಿ –ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ – ಕಾಂಗ್ರೆಸ್ ಲಾಭ
ಈಗಾಗಲೇ ಮದುವೆಯಾಗಿದ್ದ ಮಹಿಳೆ ಹಿಂದೆ ಬಿದ್ದಿದ್ದ ಗೋರಿಪಾಳ್ಯದ ನಿವಾಸಿ ಅಹ್ಮದ್ ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಮಹಿಳೆ ಹಾಗೂ ಆರೋಪಿ ನಡುವೆ ಮದುವೆ ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದು ಸಾರಕ್ಕಿ ಸಿಗ್ನಲ್ ಬಳಿ ಆ್ಯಸಿಡ್ ಹಾಕಿ ಆರೋಪಿ ಪರಾರಿಯಾಗಿದ್ದಾನೆ.
ಸಂತ್ರಸ್ಥೆಗೆ ಮದುವೆಯಾಗಿ ಮಕ್ಕಳು ಇದ್ದಾರೆ. ಆದರೂ ಪರಸ್ಪರ ಇಬ್ಬರೂ ಪರಸ್ಪರ ಇಷ್ಟ ಪಟ್ಟಿದ್ದರು ಎನ್ನಲಾಗಿದೆ. ಆದರೆ ಮರು ಮದುವೆಯಾಗಲು ಮಹಿಳೆ ಕೆಲ ಸಮಯವಕಾಶ ಕೇಳಿದ್ದರಂತೆ. ಇದಕ್ಕೆ ಒಪ್ಪದ ಆರೋಪಿ ಅಹ್ಮದ್ ತಕ್ಷಣ ಮದುವೆ ಅಗುವಂತೆ ಒತ್ತಾಯ ಮಾಡಿ ಪದೇ ಪದೇ ಗಲಾಟೆ ಮಾಡ್ತಿದ್ದನಂತೆ.
ಶುಕ್ರವಾರ ಬೆಳಗ್ಗೆ ಕೆ.ಎಸ್ ಲೇಔಟ್ ನಿಂದ ಜೆ.ಪಿ ನಗರದ ಕಡೆ ಹೋಗುತ್ತಿದ್ದ ಮಹಿಳೆಯನ್ನು ತಡೆದಿದ್ದ ಮುಖಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮಹಿಳೆಯ ಮುಖಕ್ಕೆ ಗಾಯವಾಗಿದ್ದು, ಬಲಗಣ್ಣಿಗೆ ಗಂಭೀರಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಆಕೆಯನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಕುರಿತಂತೆ ದೂರು ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ