ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ 23 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ.
ನಾಗೇಶ್ ಎಂಬಾತ ಆ ಯುವತಿಯನ್ನು ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆಯೂ ನಾಗೇಶ್ನನ್ನ ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ.
ಈ ಮಧ್ಯೆ ಯುವತಿಯ ಪೋಷಕರು ಆಕೆಗೆ ಮದುವೆ ಫಿಕ್ಸ್ ಮಾಡಿದ್ದರು. ಇದೇ ವಿಚಾರವಾಗಿ ಹುಡುಗ ಹಾಗೂ ಹುಡುಗಿಯ ನಡುವೆ ಜಗಳ ಶುರುವಾಗಿತ್ತು. ನಿನ್ನೆ ಕೂಡ ಬಸ್ ಸ್ಟಾಪ್ ಬಳಿ ಬಂದು ಪ್ರೀತಿಸುತ್ತಿದ್ದ ಯುವತಿಯ ಜೊತೆ ಮಾತನಾಡಿದ್ದ ಎನ್ನಲಾಗಿದೆ.
ಆದರೂ ಯುವತಿ ಭಯದಲ್ಲೇ ಇಂದು ತಂದೆಯ ಜೊತೆ ಕೆಲಸಕ್ಕೆ ಬಂದಿದ್ದಳು. ಅದರಂತೆ ಪ್ರಿಯತಮೆಗಾಗಿ ಪಾಗಲ್ ಪ್ರೇಮಿ ಕಾದು ಕುಳಿತಿದ್ದ. ತಂದೆಯು ಮಗಳನ್ನ ಬಿಟ್ಟು ಹೋದ ತಕ್ಷಣವೇ ನಾಗೇಶ್ ಆ್ಯಸಿಡ್ ದಾಳಿ ಮಾಡಿದ್ದಾನೆ. ನಾಗೇಶ್ ಮೊದಲೇ ಆ್ಯಸಿಡ್ ಇಟ್ಟುಕೊಂಡಿದ್ದ. ನನ್ನ ಜೊತೆ ಲವ್ ಮಾಡಿ ಮತ್ತೊಬ್ಬನ ಜೊತೆ ಮದುವೆಯಾಗ್ತಿಯಾ ಎಂದು ಹೇಳಿ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಯುವತಿ ಪರಿಸ್ಥಿತಿ ಗಂಭೀರ :
ಆ್ಯಸಿಡ್ ದಾಳಿ ಪ್ರಕರಣ ಸಂಬಂಧಿಸಿದಂತೆ ಯುವತಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಯುವತಿ ಪರಿಸ್ಥಿತಿ ಗಂಭೀರವಾಗಿದೆ. ಒಂದು ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶೌಚಾಲಯಕ್ಕೆ ಬಳಸುವ ಆ್ಯಸಿಡ್‍ನಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕೃತ್ಯಕ್ಕೆ ಬಳಸಿದ್ದ ಆ್ಯಸಿಡ್ ಯಾವುದು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ಡಿಸಿಪಿ ಹೇಳಿದ್ದಾರೆ.
- ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!
- 2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
- ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ