ಬೆಂಗಳೂರು: 3 ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದು, ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತನನ್ನು ಬಿಹಾರ ಮೂಲದ ಶೇಖ್ ನಸ್ರೂ (35) ಎಂದು ಗುರುತಿಸಲಾಗಿದೆ. ಈತ ಪ್ಲಾಸ್ಟಿಕ್ ಮತ್ತು ಬ್ಯಾಗ್ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಮದ್ಯದ ನಶೆಯಲ್ಲಿದ್ದು, ತನ್ನ ಆವೇಶದಲ್ಲಿ ಈ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಜ.24 ರವರೆಗೆ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದು, ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕಾಟನ್ ಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಘಟನೆಯನ್ನು ರಾಜ್ಯಾದ್ಯಂತ ತೀವ್ರವಾಗಿ ಖಂಡಿಸಲಾಗಿದೆ.ಇದನ್ನು ಓದಿ –ದುಬೈ ಕಾರ್ ರೇಸ್‌ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಸಾಧನೆ
ಪ್ರಾಣಿಹಿಂಸಾ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿ ಶೇಖ್ ನಸ್ರೂ ಆರೋಪಿಯನ್ನು ಬಂಧಿಸಿದ್ದಾರೆ.
More Stories
ಹಣ ಡಬ್ಲಿಂಗ್ ಹೆಸರಲ್ಲಿ 2 ಕೋಟಿ ರೂಪಾಯಿ ವಂಚನೆ: 7 ಮಂದಿ ಬಂಧನ
ದುಬೈ ಕಾರ್ ರೇಸ್‌ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಸಾಧನೆ
ಮಿಸೆಸ್ ಇಂಡಿಯಾ ಕಿರೀಟ ಗೆದ್ದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ