January 13, 2025

Newsnap Kannada

The World at your finger tips!

accident

ಸ್ನೇಹಿತನಿಗೆ ಡ್ರಾಪ್​​​ ನೀಡಿ ವಾಪಸ್ ಬರುವಾಗ ಅಪಘಾತ..ಸ್ಥಳದಲ್ಲೇ ಯುವಕ ಸಾವು

Spread the love

ಗೆಳೆಯನಿಗೆ ಡ್ರಾಪ್​ ನೀಡಿ ವಾಪಸ್ಸು ಬರುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ ನಡೆದಿದೆ.

ಗೋಪಾಲ್(26) ಸ್ಥಳದಲ್ಲೇ ಸಾವಿಗೀಡಾದ ಮೃತ ದುರ್ದೈವಿ.

ಗುಂಡಸಂದ್ರ ಗ್ರಾಮದ‌ ಯುವಕ ಗೋಪಾಲ್ ತನ್ನ ಸ್ನೇಹಿತನಿಗೆ ಡ್ರಾಫ್​ ನೀಡಲೆಂದು ಮೆಣಸಿ ಗೇಟ್ ಬಳಿ ತೆರಳಿದ್ದ. ಈ ವೇಳೆ ವಾಪಸ್​ ಬರುವಾಗ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!