ಮದುವೆ ದಿಬ್ಬಣವನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಕಂದಕಕ್ಕೆ ಉರುಳಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರಿಗೆ ಗಾಯಗೊಂಡ ಘಟನೆ ಶಿರಾದ ಮಾಳಗಟ್ಟಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಮೃತಪಟ್ಟವರನ್ನು ಕಿಟ್ಟಪ್ಪ ಹಾಗೂ ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಗಾಯಗಳಾಗಳನ್ನು ಶಿರಾದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. 20 ಜನಕ್ಕೂ ಅಧಿಕ ಜನರಿಗೆ ಕೈ, ಕಾಲು ಮುರಿದಿದೆ.
ಮೇಕೆರಹಳ್ಳಿ ಕ್ರಾಸ್ ಬಳಿ ನಾಲ್ಕೈದು ವರ್ಷಗಳಿಂದ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಈ ಅಪಘಾತ ಸಂಭವಿಸಿದೆ.
ಕೊರಟಗೆರೆ ತಾಲೂಕಿನ ಬೆಟ್ಟಶಮ್ಮನಹಳ್ಳಿಯಲ್ಲಿ ಮದುವೆ ಮುಗಿಸಿದ ಸಂಬಂಧಿಕರು ಬಂಗಾರಹಟ್ಟಿ ಯಲ್ಲಿ ನಡೆಯುವ ಆರತಕ್ಷತೆಗಾಗಿ ಬಸ್ನಲ್ಲಿ ತೆರಳುತ್ತಿದ್ದರು.
ಶಿರಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು