December 22, 2024

Newsnap Kannada

The World at your finger tips!

actor , injury , film

Accident during shooting: Amitabh Bachchan seriously injured ಶೂಟಿಂಗ್ ವೇಳೆ ಅವಘಡ: ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ

ಶೂಟಿಂಗ್ ವೇಳೆ ಅವಘಡ: ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ

Spread the love

ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಗಾಯಗೊಂಡಿದ್ದಾರೆ.

ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಬಳಿಕ ಅವರಿಗೆ ಬೆಡ್ ರೆಸ್ಟ್‌ಗೆ ವೈದ್ಯರು ಸಲಹೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಖುದ್ದು ಮಾಹಿತಿ ನೀಡಿರುವ ಅಮಿತಾಭ್ ಬಚ್ಚನ್, ಚಿತ್ರೀಕರಣದ ವೇಳೆ ಪಕ್ಕೆಲುಬಿನ ಕಾರ್ಟಿಲೇಜ್ ಮುರಿದಿದೆ, ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮುಂಬೈನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

ಗಾಯವು ತೀವ್ರ ನೋವಿನಿಂದ ಕೂಡಿದ್ದು ನಡೆದಾಡಲು ಕಷ್ಟವಾಗಿದೆ ಮತ್ತು ಉಸಿರಾಟದ ಸಮಸ್ಯೆಯೂ ಇದೆ. ಅದಾಗ್ಯೂ ಯಾವುದೇ ತೊಂದರೆಗಳಿಲ್ಲ, ಚೇತರಿಕೆ ಕಾಣಲು ಹಲವು ವಾರಗಳ ಸಮಯ ಬೇಕಾಗಬಹುದು ಹೀಗಾಗಿ ಯಾವ ಹಿತೈಷಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ, ಮನೆಯ ಬಳಿ ಯಾರು ಬರಬೇಡಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಅವರು ತಮ್ಮ ಪೊಸ್ಟ್ ನಲ್ಲಿ ತಿಳಿಸಿದ್ದಾರೆ.ಇದನ್ನು ಓದಿ –ಪಿಎಂ ಕಿಸಾನ್ 13ನೇ ಕಂತಿನ ಹಣವಿನ್ನೂ ರೈತರ ಖಾತೆಗೆ ಬಂದಿಲ್ವಾ?ಈ ಸಂಖ್ಯೆಗೆ ಕರೆ ಮಾಡಿ

#AmitabhBachchan #AmitabhBachchaninjured #BREAKINGNEWS #BIGB #BTOWN #LATESTNEWS #BOLLYWOOD

Copyright © All rights reserved Newsnap | Newsever by AF themes.
error: Content is protected !!