ಬೆಂಗಳೂರಿನ ಸಿವಿ ರಾಮನ್ ನಗರದ ಬಿಬಿಎಂಪಿ ಕಚೇರಿಯಲ್ಲಿನ ಹೆಲ್ತ್ ಇನ್ಸ್ ಪೆಕ್ಟರ್ ರಾಮಯ್ಯ ಎಂಬುವರು ಸ್ಪಾ ಲೈಸೆನ್ಸ್ ನವೀಕರಣಕ್ಕಾಗಿ ಮಾಲೀಕರಿಗೆ 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನಲೆಯಲ್ಲಿ ಅವರ ವಿರುದ್ಧ ಮಾಲೀಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಹೆಲ್ತ್ ಇನ್ಸ್ ಪೆಕ್ಟರ್ ರಾಮಯ್ಯ ಕೇಳಿದ್ದಂತ ಲಂಚದ ಹಣದಲ್ಲಿ 18,000 ಮುಂಗಡವಾಗಿ ಕೊಡುವಂತ ವೇಳೆಯಲ್ಲಿ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೂಲಕ ಲಂಚದ ಹಣ ಸ್ವೀಕರಿಸುವಾಗಲೇ ಹೆಲ್ತ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಲಂಚದ ಹಣ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಸಿವಿ ರಾಮನ್ ನಗರದ ಬಿಬಿಎಂಪಿ ಕಚೇರಿಯ ಹೆಲ್ತ್ ಇನ್ಸ್ ಪೆಕ್ಟರ್ ರಾಮಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇದನ್ನು ಓದಿ – ಗುತ್ತಿಗೆ ನೌಕರರ ಸಂಬಳವೂ ಶೇ.15 ಹೆಚ್ಚಳ: ಏಪ್ರಿಲ್ 1 ರಿಂದ ಜಾರಿ
#lokayuktatrap #healthinspector #bribe #BBMP #Bengalurunews #Latestnews #karnataka #thenewsnap #BREAKINGNEWS
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು