February 23, 2026

Newsnap Kannada

The World at your finger tips!

acb 1

ಬೆಳ್ಳೂರು ಪಟ್ಟಣ ಪಂಚಾಯ್ತಿ ಲಂಚಕೋರ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ

Spread the love

ಅಂತರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಿನದಂದೇ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಯ ಇಬ್ಬರು ಲಂಚಕೋರ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ.

ಬೆಳ್ಳೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಆರ್ ವಿ ಮಂಜುನಾಥ್ ಮತ್ತು ಪ್ರಭಾರ ಕಂದಾಯ ನಿರೀಕ್ಷಕ ದೇವರಾಜು ಎಂಬುವರೇ ಎಸಿಬಿ ಬಲೆಗೆ ಬಿದ್ದಿರುವ ಲಂಚಕೋರ ಆರೋಪಿಗಳು.

ಬೆಳ್ಳೂರು ಕ್ರಾಸ್ ನಲ್ಲಿ ಕಂದಾಯ ಇಲಾಖೆಯಲ್ಲಿ ಅನ್ಯಕ್ರಾಂತ ಗೊಂಡಿದ್ದ ಜಮೀನಿನಲ್ಲಿ ವಸತಿ ಉದ್ದೇಶಕ್ಕಾಗಿ ಈ ಸ್ವತ್ತು ಖಾತೆ ಮಾಡಿಕೊಡಲು ಅಧಿಕಾರಿಗಳು 30 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟುಮುಂಗಡ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬೆಳ್ಳೂರು ಕ್ರಾಸ್ ನ ಮಾಯಣ್ಣ ಗೌಡ ಅಲಿಯಾಸ್ ಗುಂಡ ಎಂಬುವರು ತಮಗೆ ಸೇರಿದ ಗೋವಿಂದ ಘಟ್ಟ ಸರ್ವೆ ನಂಬರ್ 6/7 ರ 24 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಅನ್ಯಕ್ರಾಂತ ಮಾಡಿಸಿ ಈ ಜಮೀನನ್ನು ಈ ಸ್ವತ್ತು ಖಾತೆ ಮಾಡಿಕೊಡುವಂತೆ ಕಳೆದ ನವಂಬರ್ 30ರಂದು ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಮುಖ್ಯಾಧಿಕಾರಿ ಆರ್. ವಿ. ಮಂಜುನಾಥ್ ಮತ್ತು ಪ್ರಭಾರ ಕಂದಾಯ ನಿರೀಕ್ಷಕ ದೇವರಾಜು ಮೂವತ್ತು ಸಾವಿರ ಕೊಟ್ಟರೆ ಖಾತೆ ಮಾಡಿಕೊಡುವುದಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

error: Content is protected !!